ಮಂಗಳೂರು: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳ ಪತ್ತೆಗೆ ಎನ್ಐಎ ಮತ್ತೊಮ್ಮೆ ನಗದು ಬಹುಮಾನ ಘೋಷಿಸಿದೆ.
ಆರೋಪಿಗಳಾದ ನೌಷದ್, ಅಬ್ದುಲ್ ನಾಸೀರ್ ಮತ್ತು ಅಬ್ದುಲ್ ರಹಮಾನ್ ನ ಸುಳಿವು ನೀಡಿದವರಿಗೆ ತಲಾ 2 ಲಕ್ಷ ನಗದು ಬಹುಮಾನವನ್ನು ಎನ್ಐಎ ಘೋಷಿಸಿದೆ.
ಈ ಮೂವರು ಆರೋಪಿಗಳು ನಿಷೇಧಿತ ಪಿಎಫ್ಐ (PFI) ಸಂಘಟನೆಯ ಕಾರ್ಯಕರ್ತರಾಗಿದ್ದು ಈ ಹಿಂದೆ ಎನ್ಐಎ ಅಧಿಕಾರಿಗಳು ನೌಷಾದ್ ಮನೆ ಮೇಲೆ ದಾಳಿ ನಡೆಸಿ ಶರಣಾಗುವಂತೆ ನೋಟಿಸ್ ನೀಡಿದ್ದರು.
ಪ್ರವೀಣ್ ನೆಟ್ಟಾರು ಬರ್ಬರ ಹತ್ಯೆ
2022ರ ಜುಲೈ 26ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟಾರು ನನ್ನು ಆತನ ಕೋಳಿ ಅಂಗಡಿ ಬಳಿಯೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಈ ಪ್ರಕರಣ ಸಂಬಂಧ ಎನ್ಐಎ ಹಲವು ಆರೋಪಿಗಳನ್ನು ಬಂಧಿಸಿದೆ.