HEALTH TIPS

'ಮಕ್ಕಳು ಮತ್ತು ಪೋಷಕರ ಗಮನಕ್ಕೆ..; ಅಪರಿಚಿತರ ಬಗ್ಗೆ ಎಚ್ಚರದಿಂದಿರಿ'; ಕಳೆದ 10 ತಿಂಗಳಲ್ಲಿ 115 ಪ್ರಕರಣಗಳು ದಾಖಲು

                     ಮಕ್ಕಳ ಮೇಲಿನ ದೌರ್ಜನ್ಯದ ಸುದ್ದಿಗಳು ನಿತ್ಯದ ದೃಶ್ಯವಾಗುತ್ತಿವೆ. ಆಲುವಾದಲ್ಲಿ ಐದು ವರ್ಷದ ಬಾಲಕಿಯನ್ನು ಅಪಹರಿಸಿ ಅಮಾನುಷವಾಗಿ ಅತ್ಯಾಚಾರ ಮಾಡಿ ಹತ್ಯೆಗೈದಿರುವುದು,  ಓಯೂರಿನಲ್ಲಿ ಆರು ವರ್ಷದ ಬಾಲಕಿಯನ್ನು ಅಪಹರಣಕ್ಕೊಳಗಾಗಿ ಕೊನೆಗೆ ನಿನ್ನೆ ಸುರಕ್ಷಿತವಾಗಿ ಬಿಡುಗಡೆಗೊಂಡಿರುವುದು ಮೊದಲಾದ ಸುದ್ದಿ ನೋಡಿದ ಮೇಲೆ ಈ ಪುಟ್ಟ ಕೇರಳ ಮಕ್ಕಳೂ ಸುರಕ್ಷಿತವಲ್ಲ ಎಂಬುದು ಅರಿವಾಗುತ್ತದೆ.

                  ಈ ವರ್ಷದ ಸೆಪ್ಟೆಂಬರ್‍ವರೆಗೆ ಕೇರಳದಲ್ಲಿ 115 ಮಕ್ಕಳ ಅಪಹರಣ ಪ್ರಕರಣಗಳು ದಾಖಲಾಗಿವೆ. ಅಪ್ರಾಪ್ತ ವಯಸ್ಕರಿಗೆ ಆಮಿಷವೊಡ್ಡಿದ ಪ್ರಕರಣಗಳು ಮತ್ತು ಇತರರನ್ನು ಅಪಹರಣ ವಿಭಾಗದಡಿ ಪೋಲೀಸರು ಸೇರಿಸಿದ್ದಾರೆ. 2022 ರ ಅಂದಾಜಿನ ಪ್ರಕಾರ, 269 ಅಪ್ರಾಪ್ತ ಮಕ್ಕಳನ್ನು ಅಪಹರಿಸಲಾಗಿದೆ. 2021 ರಲ್ಲಿ, ಇದು 257 ಆಗಿತ್ತು. ಕ್ರೈಂ ರೆಕಾಡ್ರ್ಸ್ ಬ್ಯೂರೋದ ಅಂಕಿಅಂಶಗಳು ಪ್ರತಿ ವರ್ಷ ಪ್ರಕರಣಗಳು ಹೆಚ್ಚುತ್ತಿವೆ ಎಂದು ತೋರಿಸುತ್ತವೆ. ಕಳೆದ ಐದು ವರ್ಷಗಳಲ್ಲಿ ನಾಪತ್ತೆಯಾಗಿರುವ ಮಕ್ಕಳ ಪೈಕಿ ಇನ್ನೂ 60 ಮಕ್ಕಳು ಪತ್ತೆಯಾಗಬೇಕಿದೆ ಎಂದು ಸ್ವತಃ ಮುಖ್ಯಮಂತ್ರಿಗಳೇ ವಿಧಾನಸಭೆ ಅಧಿವೇಶನದಲ್ಲಿ ಮಾಹಿತಿ ನೀಡಿದ್ದಾರೆ. ಪತ್ತೆಯಾಗಿರುವವರಲ್ಲಿ 48 ಹುಡುಗರು ಮತ್ತು 12 ಹುಡುಗಿಯರು. ಮಕ್ಕಳ ಮೇಲಿನ ದೌರ್ಜನ್ಯದ ವಿಚಾರದಲ್ಲಿ ಎಚ್ಚರವಾಗಿರುವುದು ಮಾತ್ರ ನಮ್ಮ ಮುಂದಿದೆ.

ಮಕ್ಕಳು ಮತ್ತು ಪೋಷಕರ ಗಮನಕ್ಕೆ..

1. ಮಕ್ಕಳು ಪೋಷಕರು ಮತ್ತು ನಿಕಟ ಸಂಬಂಧಿಗಳ ಸಂಖ್ಯೆಯನ್ನು ಕಲಿತಿದ್ದಾರೆ ಎಂದು ಖಚಿತಪಡಿಸಿಕೊಳ್ಳಿ. ಇದು ನಿಮ್ಮ ಮಗುವಿಗೆ ಅಗತ್ಯವಿರುವ ಸಮಯದಲ್ಲಿ ಸಹಾಯ ಮಾಡುತ್ತದೆ.

2. ಮಕ್ಕಳಿಗೆ ಸಮರ ಕಲೆಗಳನ್ನು ಕಲಿಸಿ. ಇದು ಅವರ ಸುರಕ್ಷತೆಗೆ ಸಹಾಯ ಮಾಡುತ್ತದೆ.

3.ಶಾಲಾ ಮಕ್ಕಳಿಗೆ ಬ್ಯಾಗ್ ಜೊತೆಗೆ ಒಂದು ಶಿಳ್ಳೆ ನೀಡಿ. ತುರ್ತು ಸಂದರ್ಭಗಳಲ್ಲಿ ಮಾತ್ರ ಬಳಸುವಂತೆ ಸೂಚಿಸಿ.

4. ಅಪರಿಚಿತರು ಕೊಡುವ ಆಹಾರ ವಸ್ತು ಸೇವಿಸದಂತೆ ಅಥವಾ ಕುಡಿಯದಂತೆ ಮಕ್ಕಳಿಗೆ ಸ್ಪಷ್ಟಪಡಿಸಿ. ಅಪರಿಚಿತರೊಂದಿಗೆ ಹೇಗಿರಬೇಕೆಂದು ಕಲಿಸಿ.

5. ಯಾರಾದರೂ ಮಕ್ಕಳೊಂದಿಗೆ ಭಿಕ್ಷೆ ಬೇಡುವುದನ್ನು ಕಂಡರೆ ತಕ್ಷಣ ಪೋಲೀಸರಿಗೆ ಮಾಹಿತಿ ನೀಡಿ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries