ಮಲಪ್ಪುರಂ: 2021ರಲ್ಲಿ ಕಾಲ್ನಡಿಗೆಯಲ್ಲಿ ಆರಂಭವಾದ ಯಾತ್ರೆ ಈ ವರ್ಷ ಶಬರಿಮಲೆ ತಲುಪುವಲ್ಲಿ ಕೊನೆಗೂ ಸಾರ್ಥಕವಾಗಿದೆ. ಇಷ್ಟು ದೂರ ನಡೆದು ಭಕ್ತರೊಬ್ಬರು ಶಬರಿಮಲೆ ತಲುಪಿದ್ದು ಇದೇ ಮೊದಲು.
ಎರಡು ವರ್ಷ, ಒಂದು ತಿಂಗಳು ಮತ್ತು 10 ದಿನಗಳಲ್ಲಿ ಸಾವಿರಾರು ಕಿಲೋಮೀಟರ್‍ಗಳನ್ನು ಕ್ರಮಿಸಿದ ಮಲಪ್ಪುರಂನ ಕೊಟ್ಟಾಯಕಲ್ ಮೂಲದ ಶಿವನ್ ಕಲರಿಕಲ್ ಅವರ ಗುರಿ ಅಯ್ಯಪ್ಪ ಸನ್ನಿಧಿ ತಲುಪುದೊಂದೇ ಆಗಿತ್ತು.
ಅಕ್ಟೋಬರ್ 10, 2021 ರಂದು, ಶಿವ ಕಾಲ್ನಡಿಗೆಯಲ್ಲಿ ಭಾರತ ಯಾತ್ರೆಗೆ ಮಲಪ್ಪುರಂ ಕೊಟ್ಟೈಕಲ್‍ನಿಂದ ಹೊರಟರು. ಪ್ರಯಾಣದ ಕೊನೆಯಲ್ಲಿ, ಅಯ್ಯಪ್ಪ ಸನ್ನಿಧಿ ತಲುಪಲು ನಿರ್ಧರಿಸಲಾಗಿತ್ತು. ಕೊಟ್ಟಾಯಂನಿಂದ ಮೊದಲ ದಿನ ತೇಂಜಿಪಾಲಂನಲ್ಲಿ ತಂಗಿದ್ದರು. ನಂತರ ಅವರು 760 ರಾತ್ರಿಗಳನ್ನು ಆಶ್ರಮಗಳು, ಪೆಟ್ರೋಲ್ ಬಂಕ್‍ಗಳು ಮತ್ತು ಪ್ರಯಾಣದಲ್ಲಿ ಭೇಟಿಯಾದ ಜನರ ಮನೆಗಳಲ್ಲಿ ಕಳೆದರು. ಟ್ರಾವೆಲ್ ಬ್ಯಾಗ್‍ನಲ್ಲಿ ಟೆಂಟ್, ಮಲಗುವ ಚಾಪೆ, ಗೋಪ್ರೊ ಕ್ಯಾಮೆರಾ ಮತ್ತು ಎರಡು ಜೊತೆ ಬಟ್ಟೆ ಮಾತ್ರ ಇತ್ತು.
ಆದರೆ, ಶಬರಿಮಲೆಗೆ ತೆರಳಲು ಮಾಲಧಾರಣೆಗೈದ ಬಳಿಕ ಚಪ್ಪಲಿಯನ್ನೂ ಧರಿಸುವುದನ್ನು ಬಿಟ್ಟರು. ಭಾರತದ ಸಂಪೂರ್ಣ ರಾಜ್ಯಗಳು ನೇಪಾಳ ಮತ್ತು ಭೂತಾನ್ ಅನ್ನು ಸುತ್ತುವರೆದು ಸಂಚರಿಸಿರುವರು ಇವರು. ಮಾನಂತವಾಡಿ, ಮೈಸೂರು ಮತ್ತು ಮಂಗಳೂರು ಮೂಲಕ ಹಿಂತಿರುಗಿ ಕೊಟ್ಟಿಯೂರ್ ದೇವಸ್ಥಾನದಲ್ಲಿ ಮಾಲಧಾರಿಯಾದರು. ಡರಡು ವರ್ಷಗಳ ನಂತರ, ಸಹೋದರಿಯರು ತಿರೂರ್ ನ ತ್ರಿಕಂಡ್ಯೂರ್ ದೇವಸ್ಥಾನವನ್ನು ತಲುಪಿದಾಗ ಶಿವನನ್ನು ಭೇಟಿಯಾದರು. ಮರುದಿನ ಕೊಟ್ಟಾಯಕಲ್‍ನಲ್ಲಿರುವ ತಮ್ಮ ಮನೆಗೆ ತಲುಪಿದಾಗ ಜೀವಮಾನದ ಪುಣ್ಯ ಪ್ರಾಪ್ತಿಯ ಸಂತಸ ಇದೀಗ ಅವರ ಮೊಗದಲ್ಲಿದೆ.