ಕಾಸರಗೋಡು: ಉತ್ತರ ಕೇರಳದ ಆಧ್ಯಾತ್ಮಿಕ ಕೇಂದ್ರ ಕಾಸರಗೋಡು ಆಲಂಪಾಡಿ ಸನಿಹದ ಮಡವೂರಕೋಟದ 35ನೇ ವಾರ್ಷಿಕ ಮಹಾ ಸಂಗಮ ನ.11 ಮತ್ತು 12ರಂದು ನಡೆಯಲಿರುವುದಾಗಿ ಆಧ್ಯಾತ್ಮಿಕ ಕೇಂದ್ರದ ಸೈಯದ್ ಯಹ್ಯಾ ಬುಖಾರಿ ತಙಳ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕೋಯಿಕ್ಕೋಡ್‍ನ ಮಡವೂರಿನಲ್ಲಿ ಅಂತಿಮ ವಿಶ್ರಾಂತಿ ಪಡೆಯುತ್ತಿರುವ ಸಿ. ಎಂ ಅಬೂಬಕ್ಕರ್ ವಲಿಯುಲ್ಲಾಹಿ ಅವರ ನಿರ್ದೇಶಪ್ರಕಾರ 1989ರಲ್ಲಿ ಮಡವೂರ್ ಕೋಟ ಸ್ಥಾಪನೆಗೊಂಡಿದ್ದು, ಸೈಯದ್ ಯಾಹ್ಯಾ ಬುಖಾರಿ ತಙಳ್ ಆಧ್ಯಾತ್ಮಿಕ ಕೇಂದ್ರವನ್ನು ಮುನ್ನಡೆಸುತ್ತಿದ್ದಾರೆ. ಮಾತಿನಿಂದಲ್ಲ ಬದಲು ಜೀವನ ಪದ್ಧತಿಯಿಂದ ಇತರರಿಗೆ ನಾವು ಮಾದರಿಯಾಗಬೇಕು ಎಂಬ ಬೋಧನೆಯನ್ನು ಮಡವೂರ್‍ಕೋಟ ನೀಡುತ್ತಿದೆ. ಕೇರಳ, ಕರ್ನಾಟಕದ ವಿವಿಧೆಡೆಯಿಂದ ಆಧ್ಯಾತ್ಮಿಕ ಕೇಂದ್ರವಾದ ಮಡವೂರ್‍ಕೋಟಕ್ಕೆ ಆಗಮಿಸುತ್ತಿದ್ದಾರೆ. ಮಡವೂರಕೋಟದಲ್ಲಿ ಸೈಯದ್ ಯಹ್ಯಾ ಬುಖಾರಿ ಅವರ ನೇತೃತ್ವದಲ್ಲಿ ಶೇಖ್ ಜೀಲಾನಿ ದಿನಾಚರಣೆಯಂದು ಮಾನವ ಮಹಾಸಂಗಮವೂ ನಡೆಯಲಿರುವುದಾಗಿ ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ಸೈಯದ್ ಇಬ್ರಾಹಿಂತಾಲ್, ರಶೀದ್ ನರಿಕೋಡ್, ನೌಫಲ್ ಚೇರಂಗೈ, ಶಿಹಾಬ್ ಚೇರಂಕೈ ಭಾಗವಹಿಸಿದ್ದರು.