ನವದೆಹಲಿ (PTI): ಭಾರತೀಯ ಕುಸ್ತಿ ಫೆಡರೇಷನ್‌ನ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ದಾಖಲಿಸಿರುವ ಪೋಕ್ಸೊ ಪ್ರಕರಣ ಕೈಬಿಡುವುದಕ್ಕೆ ಸಂಬಂಧಿಸಿ ದೆಹಲಿ ಪೊಲೀಸರು ಸಲ್ಲಿಸಿರುವ ವರದಿ ಬಗ್ಗೆ ಜನವರಿ 11ರಂದು ಆದೇಶ ಪ್ರಕಟಿಸುವುದಾಗಿ ನ್ಯಾಯಾಲಯ ಹೇಳಿದೆ.

ಅಪ್ರಾಪ್ತ ವಯಸ್ಕಳಾದ ಕುಸ್ತಿಪಟು, ಬ್ರಿಜ್ ಭೂಷಣ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಶುಕ್ರವಾರ ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಛವಿ ಕಪೂರ್ ಅವರು, 'ಆದೇಶ ಇನ್ನೂ ಸಿದ್ಧವಾಗಿಲ್ಲ' ಎಂದು ಹೇಳಿದರು.
ಹೇಳಿಕೆ ಏನು?: 'ನ್ಯಾಯಾಧೀಶರ ಕೊಠಡಿಯಲ್ಲಿ ಆಗಸ್ಟ್ 1ರಂದು ನಡೆದ ವಿಚಾರಣೆಗೆ ಈ ಕುಸ್ತಿಪಟು ಹಾಜರಾಗಿದ್ದರು. ಪೊಲೀಸರ ತನಿಖೆ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ. ಜೊತೆಗೆ, ಪ್ರಕರಣವನ್ನು ಮುಕ್ತಾಯಗೊಳಿಸುವ ಬಗ್ಗೆ ಯಾವುದೇ ವಿರೋಧ ವ್ಯಕ್ತಪಡಿಸಿಲ್ಲ' ಎಂದು ಸರ್ಕಾರಿ ಅಭಿಯೋಜಕ ಅತುಲ್ ಶ್ರೀವಾಸ್ತವ ಹೇಳಿದ್ದಾರೆ.
ಬ್ರಿಜ್ ಭೂಷಣ್ ವಿರುದ್ಧ ತಾನು ಸುಳ್ಳು ದೂರು ನೀಡಿದ್ದು ವಾಪಸ್ ಪಡೆಯುವುದಾಗಿ ಆಕೆಯ ತಂದೆ ಹೇಳಿದ್ದಾರೆ. ಹಾಗಾಗಿ, ಇದರ ಆಧಾರದ ಮೇಲೆ ಪೋಕ್ಸೊ ಪ್ರಕರಣ ಕೈಬಿಡುವುದಾಗಿ ಜೂನ್ 15ರಂದು ಪೊಲೀಸರು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು. ಅಲ್ಲದೇ, ಆರೋಪ ಸಂಬಂಧ ರುಜುವಾತುಮಾಡುವ ಸಾಕ್ಷ್ಯಗಳಿಲ್ಲವೆಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ ಎಂದು ಹೇಳಲಾಗಿದೆ.
ಲೈಂಗಿಕ ಕಿರುಕುಳ ಆರೋಪ ಸಂಬಂಧ ಆರು ಮಂದಿ ಮಹಿಳಾ ಕುಸ್ತಿಪಟುಗಳು ದಾಖಲಿಸಿರುವ ದೂರಿನ ಮೇರೆಗೆ ಬ್ರಿಜ್ ಭೂಷಣ್ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ.