ತಿರುವನಂತಪುರಂ: ರಾಜ್ಯದ ಸಾರ್ವಜನಿಕ ಶಿಕ್ಷಣ ಇಲಾಖೆಯಡಿಯ ಶಾಲೆಗಳಲ್ಲಿ ಡಿಸೆಂಬರ್ 12 ರಿಂದ 22 ರವರೆಗೆ ಎರಡನೇ ಅವಧಿಯ ಪರೀಕ್ಷೆ ನಡೆಯಲಿದೆ. ಈ ಬಗ್ಗೆ ಶಿಕ್ಷಣ ಇಲಾಖೆ ವೇಳಾಪಟ್ಟಿ( ಟೈಮ್ ಟೇಬಲ್) ಪ್ರಕಟಿಸಿದೆ.
ಡಿಸೆಂಬರ್ 12 ರಿಂದ 22 ರವರೆಗೆ ಪ್ಲಸ್ ಒನ್, ಪ್ಲಸ್ ಟು ಮತ್ತು ವಿಎಚ್‍ಎಸ್‍ಇ ಪರೀಕ್ಷೆಗಳು ನಡೆಯಲಿವೆ. 13 ರಿಂದ 21 ರವರೆಗೆ ಎಲ್‍ಪಿ, ಯುಪಿ ಮತ್ತು ಪ್ರೌಢಶಾಲಾ ಪರೀಕ್ಷೆಗಳು ನಡೆಯಲಿವೆ. 22 ರಿಂದ ಕ್ರಿಸ್ ಮಸ್ ರಜೆ ನಿಮಿತ್ತ ಶಾಲೆಗೆ ರಜೆ ನೀಡಲಾಗುತ್ತದೆ. ಬಳಿಕ ಜನವರಿ 1 ರಂದು ಪುನರಾರಂಭಗೊಳ್ಳಲಿದೆ.
ಹೈಯರ್ ಸೆಕೆಂಡರಿ ಪರೀಕ್ಷೆಗಳಿಗೆ ಸರ್ಕಾರವೇ ಪ್ರಶ್ನೆ ಪತ್ರಿಕೆಯನ್ನು ಮೊದಲಿನ ರೀತಿಯಲ್ಲಿಯೇ ಸಿದ್ಧಪಡಿಸಲಿದೆ. ವೃತ್ತಿಪರ ವಿಷಯಗಳ ಮಾದರಿ ಪ್ರಶ್ನೆಗಳನ್ನು ಸಹ ಒದಗಿಸಲಾಗುತ್ತದೆ.