ನವದೆಹಲಿ: ಭಾರತವು ಮಂಗಳವಾರ ಒಡಿಶಾ ಕರಾವಳಿಯ ಅಬ್ದುಲ್ ಕಲಾಂ ದ್ವೀಪದಿಂದ ಅಲ್ಪ ಶ್ರೇಣಿಯ ಪ್ರಳಯ್ ಖಂಡಾಂತರ ಕ್ಷಿಪಣಿಯ ಯಶಸ್ವಿ ಪರೀಕ್ಷೆಯನ್ನು ನಡೆಸಿದೆ. ಪರೀಕ್ಷಾರ್ಥ ಉಡಾವಣೆಯಲ್ಲಿ ಕ್ಷಿಪಣಿಯು ತನ್ನ ಸಂಪೂರ್ಣ ದೂರ ಸುಮಾರು 500 ಕಿ.ಮೀ. ತಲುಪಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕ್ಷಿಪಣಿ ಪರೀಕ್ಷೆಯು ಯಶಸ್ವಿಯಾಗಿದೆ ಮತ್ತು ಅದು ತನ್ನ ನಿಗದಿತ ಗುರಿಯನ್ನು ತಲುಪಿದ್ದು, ಎಲ್ಲ ನಿಯತಾಂಕಗಳಲ್ಲಿ ಯಶಸ್ವಿಯಾಗಿದೆ ಎಂದು ರಕ್ಷಣಾ ಅಧಿಕಾರಿ ತಿಳಿಸಿದ್ದಾರೆ.
ನೆರೆಯ ಚೀನಾ ಮತ್ತು ಪಾಕಿಸ್ತಾನದ ಗಡಿಯಲ್ಲಿ ದೇಶದ ರಕ್ಷಣಾ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಈ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಿದೆ ಎಂದೂ ಅವರು ಹೇಳಿದ್ದಾರೆ.
'ಪ್ರಳಯ್' 350-500 ಕಿ.ಮೀ ಕಿರು ಶ್ರೇಣಿಯ, ಮೇಲ್ಮೈಯಿಂದ ಮೇಲ್ಮೈಗೆ 500-1,000 ಕೆಜಿ ಪೇಲೋಡ್ ಸಾಮರ್ಥ್ಯದ ಕ್ಷಿಪಣಿಯಾಗಿದೆ. ಘನ ಇಂಧನ, ಯುದ್ಧಭೂಮಿ ಕ್ಷಿಪಣಿಯು ಪೃಥ್ವಿ ಡಿಫೆನ್ಸ್ ವೆಹಿಕಲ್ ಅನ್ನು ಆಧರಿಸಿದೆ.
ವಾಸ್ತವ ಗಡಿ ರೇಖೆ (ಎಲ್‌ಎಸಿ) ಮತ್ತು ಗಡಿ ರೇಖೆ (ಎಲ್‌ಒಸಿ) ಉದ್ದಕ್ಕೂ ನಿಯೋಜನೆಗಾಗಿ ಪ್ರಳಯ್ ಅನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಉಕ್ರೇನ್ ಯುದ್ಧದಲ್ಲಿ ಬಳಸಲಾದ ಚೀನಾದ 'ಡಾಂಗ್ ಫೆಂಗ್ 12' ಮತ್ತು ರಷ್ಯಾದ 'ಇಸ್ಕಾಂಡರ್' ನೊಂದಿಗೆ 'ಪ್ರಳಯ್' ಕ್ಷಿಪಣಿಯನ್ನು ಹೋಲಿಸಬಹುದು ಎಂದು ಅವರು ಹೇಳಿದ್ದಾರೆ. ಪಾಕಿಸ್ತಾನವು ಸಹ ತನ್ನ ರಕ್ಷಣಾ ವ್ಯವಸ್ಥೆಯಲ್ಲಿ ಯುದ್ಧತಂತ್ರದ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹೊಂದಿದೆ.