ಇಡುಕ್ಕಿ: ಮಂಡಲ ಪೂಜಾ ಅವಧಿ ಆರಂಭವಾಗಿದ್ದು, ಸನ್ನಿಧಿ, ಪಂಬಾ ಸೇರಿದಂತೆ ವ್ಯಾಪಕ ಸಿದ್ಧತೆಗಳು ನಡೆಯುತ್ತಿವೆ.
ಅಯ್ಯಪ್ಪ ಭಕ್ತರ ಅನುಕೂಲಕ್ಕಾಗಿ ಕೆಎಸ್‍ಆರ್‍ಟಿಸಿ ವಿಶೇಷ ಸೇವೆ ಆರಂಭಿಸಿದೆ. ಭಕ್ತರ ಪ್ರಮುಖ ಕೇಂದ್ರವಾದ ಕುಮಳಿಯಿಂದ 12 ಕೆಎಸ್‍ಆರ್‍ಟಿಸಿ ಸೇವೆಗಳು ಆರಂಭಗೊಂಡಿವೆ.
ಈಗಿರುವ ಸೇವೆಗಳಿಗೆ ಯಾವುದೇ ಧಕ್ಕೆಯಾಗದಂತೆ ಹೊಸ ಸೇವೆಯನ್ನು ಪ್ರಾರಂಭಿಸಲಾಗಿದೆ. ಕುಮಳಿ ಡಿಪೆÇೀದಿಂದ ಮಂಡಲ ಪೂಜೆ ಮುಗಿಯುವವರೆಗೆ ಪ್ರತಿದಿನ ಸೇವೆಯನ್ನು ಖಚಿತಪಡಿಸಿಕೊಳ್ಳಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಟಿಕೆಟ್ ದರ 232 ರೂ. ಬಸ್ಸು ಪೂರ್ಣ ತುಂಬಿದ ಬಳಿಕ ಸಂಚಾರ ನಡೆಸಲಾಗುವುದು.
40 ಮಂದಿ ಪ್ರಯಾಣಿಕರಿರುವಾಗ ಬಸ್ ಹೊರಡಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕುಮಳಿ ಪಟ್ಟಣದ ಪಂಚಾಯಿತಿ ಬಸ್ ನಿಲ್ದಾಣದಲ್ಲಿ 24 ಗಂಟೆಗಳ ನಿಯಂತ್ರಣ ಕೊಠಡಿಯನ್ನೂ ಆರಂಭಿಸಲಾಗಿದೆ.