ಕಾಸರಗೋಡು: ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ಕಾಸರಗೋಡು ಪೆರಿಯ ಕ್ಯಾಂಪಸ್‍ನ ಗ್ರಂಥಾಲಯ ಇಲಾಖೆಯ ಆಶ್ರಯದಲ್ಲಿ ಪುಸ್ತಕೋತ್ಸವವ ನವೆಂಬರ್ 14 ರಿಂದ 16 ರವರೆಗೆ ನಡೆಯಲಿರುವುದು.
ಕ್ಯಾಂಪಸ್‍ನ ಪಯಸ್ವಿನಿ ಸಭಾಂಗಣದಲ್ಲಿ ನಡೆಯಲಿರುವ ಪುಸ್ತಕೋತ್ಸವ ಸಮಾರಂಭವನ್ನು ಪ್ರಭಾರ ಉಪಕುಲಪತಿ ಕೆ.ಸಿ. ಬೈಜು ಉದ್ಘಾಟಿಸುವರು. ಹಲವು ಪ್ರಮುಖ ಪ್ರಕಾಶಕರು ಭಾಗವಹಿಸಲಿದ್ದಾರೆ. ನವೆಂಬರ್ 16 ರಂದು ಪುಸ್ತಕೋತ್ಸವಕ್ಕೆ ಭೇಟಿ ನೀಡಿ ಕಡಿಮೆ ದರದಲ್ಲಿ ಪುಸ್ತಕಗಳನ್ನು ಖರೀದಿಸಲು ವಿವಿಧ ಕಾಲೇಜುಗಳಿಗೆ ಅವಕಾಶ ನೀಡಲಾಗಿದೆ ಎಂದು ಪರಕಟಣೆ ತಿಳಿಸಿದೆ.