ಕಾಸರಗೋಡು: ನವ ಕೇರಳ ಸಮಾವೇಶದ ಅಂಗವಾಗಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಥಾಪಿಸಲಾದ ಕೌಂಟರ್‍ಗಳಿಂದ 14600 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಸ್ಥಳೀಯ ರಸ್ತೆ ಅಭಿವೃದ್ಧಿ, ಜೀವನ ವಸತಿ ಯೋಜನೆ, ವಿವಿಧ ಕಲ್ಯಾಣ ಯೋಜನೆಗಳ ಅರ್ಜಿಗಳು, ಜಮೀನು ಸಮಸ್ಯೆ ಸೇರಿದಂತೆ ಸಾಮಾನ್ಯ ದೂರುಗಳನ್ನು ಸ್ವೀಕರಿಸಲಾಯಿತು.
ಕಾಸರಗೋಡು ಕ್ಷೇತ್ರದಲ್ಲಿ 3451 ಅರ್ಜಿ, ಉದುಮ ಕ್ಷೇತ್ರದ ನವಕೇರಳ ಸಮಾವೇಶದಲ್ಲಿ 3733 ಅರ್ಜಿ, ತ್ರಿಕರಿಪುರ ಕ್ಷೇತ್ರದಲ್ಲಿ 2567 ದೂರುಗಳನ್ನು ಸ್ವೀಕರಿಸಲಾಗಿದೆ.
ದೂರುಗಳನ್ನು ಪರಿಶೀಲಿಸಿ ಮುಂದಿನ ಕ್ರಮಕ್ಕಾಗಿ ಪೆÇೀರ್ಟಲ್ ಮೂಲಕ ನೀಡಲಾಗುವುದು. ಒಂದು ವಾರದಿಂದ ಒಂದೂವರೆ ತಿಂಗಳೊಳಗೆ ದೂರುಗಳನ್ನು ಪರಿಹರಿಸಲಾಗುವುದು. ದೂರು ಸ್ವೀಕರಿಸಿದ ಜಿಲ್ಲಾ ಮಟ್ಟದ ಅಧಿಕಾರಿಗಳು ಎರಡು ವಾರಗಳಲ್ಲಿ ದೂರನ್ನು ಪರಿಹರಿಸಿ ವಿವರವಾದ ಉತ್ತರವನ್ನು ಅಪ್‍ಲೋಡ್ ಮಾಡಲಿದ್ದಾರೆ. ಮುಂದಿನ ಕ್ರಮದ ಅಗತ್ಯವಿರುವ ದೂರುಗಳನ್ನು ಗರಿಷ್ಠ ನಾಲ್ಕು ವಾರಗಳಲ್ಲಿ ಪರಿಹರಿಸಲಾಗುವುದು. ಅಪರ ಜಿಲ್ಲಾಧಿಕಾರಿ ಸುಫಿಯಾನ್ ಅಹ್ಮದ್, ಆರ್‍ಡಿಒ ಅತುಲ್ ಸ್ವಾಮಿನಾಥ್ ಮತ್ತು ಸಹಾಯಕ ಜಿಲ್ಲಾಧಿಕಾರಿ (ಆರ್‍ಆರ್) ಸಿರೋಶ್ ಪಿ ಜಾನ್ ನೇತೃತ್ವದಲ್ಲಿ ತಹಶೀಲ್ದಾರರು ಮತ್ತು ಇತರ ಕಂದಾಯ ಅಧಿಕಾರಿಗಳು ದೂರುಗಳ ಮೇಲ್ವಿಚಾರಣೆ ನಡೆಸಿದರು.