ತ್ರಿಪುರಾ: ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ ಆರೋಪದ ಮೇರೆಗೆ ನಾಲ್ವರು ಮಕ್ಕಳು ಸೇರಿದಂತೆ 14 ಬಾಂಗ್ಲಾದೇಶಿ ಪ್ರಜೆಗಳನ್ನು ಭಾನುವಾರ ತ್ರಿಪುರಾದ ಗೋಮತಿ ಜಿಲ್ಲೆಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಖಚಿತ ಮಾಹಿತಿ ಆಧಾರದ ಮೇಲೆ ಮೇರೆಗೆ ಅಂತಾರಾಷ್ಟ್ರೀಯ ಗಡಿ ಸಮೀಪದ ಬೈಷ್ನಾಬ್‌ಪುರ ಗ್ರಾಮದ ಎರಡು ಮನೆಗಳ ಮೇಲೆ ದಾಳಿ ನಡೆಸಿ ಅಕ್ರಮ ವಲಸಿಗರನ್ನು ಬಂಧಿಸಲಾಗಿದೆ ಎಂದು ಸಬ್ರೂಮ್ ಪೊಲೀಸ್ ಠಾಣೆಯ ಪ್ರಭಾರಿ ಅಧಿಕಾರಿ ಅಪು ದಾಸ್ ತಿಳಿಸಿದ್ದಾರೆ.ಈ ಬಾಂಗ್ಲಾದೇಶಿ ಪ್ರಜೆಗಳಿಗೆ ಆಶ್ರಯ ನೀಡಿದ ಮೂವರು ಸ್ಥಳೀಯರನ್ನು ಸಹ ಬಂಧಿಸಿದ್ದೇವೆ" ಎಂದು ಅವರು ಹೇಳಿದರು.
ಸಬ್ರೂಮ್ ಉಪವಿಭಾಗದ 62 ಕಿಮೀ ಗಡಿಯನ್ನು ಭೌಗೋಳಿಕ ಸಮಸ್ಯೆಗಳಿಂದ ಸಂಪೂರ್ಣವಾಗಿ ಬೇಲಿ ಹಾಕಲು ಸಾಧ್ಯವಾಗಲಿಲ್ಲ ಮತ್ತು ಇದರ ಪರಿಣಾಮವಾಗಿ ಮಾನವ ಕಳ್ಳಸಾಗಣೆದಾರರು ಅದನ್ನು ಬಳಸುತ್ತಿದ್ದಾರೆ ಎಂದು ದಾಸ್ ಹೇಳಿದರು.
ಮಾನವ ಕಳ್ಳಸಾಗಣೆಯ ಬಗ್ಗೆ ಶೂನ್ಯ ಸಹಿಷ್ಣುತೆ ತೋರಿಸುತ್ತಿದ್ದೇವೆ. ಒಳನುಸುಳುವಿಕೆಗೆ ಸಹಾಯ ಮಾಡಿದ ಆರೋಪಿಗಳ ವಿರುದ್ಧವೂ ಮಾನವ ಕಳ್ಳ ಸಾಗಣೆ ಆರೋಪದಡಿ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಅವರು ಹೇಳಿದರು.