ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯು.ಐ.ಡಿ.ಎ.ಐ) ಆಧಾರ್ ಕಾರ್ಡ್‍ನಲ್ಲಿ ಒದಗಿಸಲಾದ ಮಾಹಿತಿಯನ್ನು ಬದಲಾಯಿಸಲು ಅಥವಾ ಸರಿಪಡಿಸಲು ಯಾವುದೇ ಶುಲ್ಕವನ್ನು ವಿಧಿಸುವುದಿಲ್ಲ. ಈ ಸೇವೆಯು ಡಿಸೆಂಬರ್ 14 ರವರೆಗೆ ಲಭ್ಯವಿರುತ್ತದೆ.
ಈ ಅವಧಿಯಲ್ಲಿ ಹೆಸರು, ವಿಳಾಸ, ಹುಟ್ಟಿದ ದಿನಾಂಕ, ಲಿಂಗ, ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಅನ್ನು ಬದಲಾಯಿಸಲು ಅಥವಾ ಸರಿಪಡಿಸಲು ಸಾಧ್ಯವಿದೆ. ಆಧಾರ್‍ನಲ್ಲಿ ಎಲ್ಲಾ ಜನಸಂಖ್ಯಾ ವಿವರಗಳನ್ನು ನವೀಕರಿಸುವುದು ಉಚಿತ ಮತ್ತು ಆನ್‍ಲೈನ್‍ನಲ್ಲಿ ಮಾಡಬಹುದು.
ತಮ್ಮ ಪೋಟೋ, ಐರಿಸ್ ಅಥವಾ ಇತರ ಬಯೋಮೆಟ್ರಿಕ್ ವಿವರಗಳನ್ನು ನವೀಕರಿಸಲು ಅಗತ್ಯವಿರುವ ವ್ಯಕ್ತಿಗಳು ಆಧಾರ್ ಸೇವಾ ಕೇಂದ್ರಕ್ಕೆ ಖುದ್ದಾಗಿ ಭೇಟಿ ನೀಡಬೇಕು ಮತ್ತು ಅನ್ವಯವಾಗುವ ಶುಲ್ಕವನ್ನು ಪಾವತಿಸಬೇಕು. ಯು.ಐ.ಡಿ.ಎ.ಐ ಪ್ರತಿ 10 ವರ್ಷಗಳಿಗೊಮ್ಮೆ ಆಧಾರ್ ಕಾರ್ಡ್ ವಿವರಗಳನ್ನು ನವೀಕರಿಸುವುದನ್ನು ಕಡ್ಡಾಯಗೊಳಿಸಿದೆ.