ನವದೆಹಲಿ: 15,000 ಮಹಿಳಾ ಸ್ವ ಸಹಾಯ ಗುಂಪುಗಳಿಗೆ(ಎಸ್‌ಎಚ್‌ಜಿ) 2024-25ರ ಹಣಕಾಸು ವರ್ಷದಿಂದ ಎರಡು ವರ್ಷಗಳಲ್ಲಿ ಡ್ರೋನ್‌ಗಳನ್ನು ಒದಗಿಸಲು ₹1,261 ಕೋಟಿ ವಿನಿಯೋಗಕ್ಕೆ ಕೇಂದ್ರ ಸಚಿವ ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ.
ನವದೆಹಲಿ: 15,000 ಮಹಿಳಾ ಸ್ವ ಸಹಾಯ ಗುಂಪುಗಳಿಗೆ(ಎಸ್‌ಎಚ್‌ಜಿ) 2024-25ರ ಹಣಕಾಸು ವರ್ಷದಿಂದ ಎರಡು ವರ್ಷಗಳಲ್ಲಿ ಡ್ರೋನ್‌ಗಳನ್ನು ಒದಗಿಸಲು ₹1,261 ಕೋಟಿ ವಿನಿಯೋಗಕ್ಕೆ ಕೇಂದ್ರ ಸಚಿವ ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ.
ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.
' 2024-25 ಹಾಗೂ 2025-26ರ ಹಣಕಾಸು ವರ್ಷದಲ್ಲಿ ಆಯ್ದ 15,000 ಮಹಿಳಾ ಸ್ವ ಸಹಾಯ ಗುಂಪುಗಳಿಗೆ ಡ್ರೋನ್‌ಗಳನ್ನು ವಿತರಿಸುವ ಯೋಜನೆ ಇದಾಗಿದೆ. ಸ್ವಸಹಾಯ ಗುಂಪುಗಳು ಈ ಡ್ರೋನ್‌ಗಳನ್ನು ರೈತರಿಗೆ ಕೃಷಿ ಕೆಲಸಕ್ಕೆ ಬಾಡಿಗೆ ನೀಡಿ ಆದಾಯ ಗಳಿಸಬಹುದಾಗಿದೆ' ಎಂದು ಅವರು ಹೇಳಿದ್ದಾರೆ.
ಈ ಯೋಜನೆಯು ಮಹಿಳಾ ಸ್ವ ಸಹಾಯ ಗುಂಪುಗಳಿಗೆ ಸುಸ್ಥಿರ ಉದ್ಯಮಕ್ಕೆ ನೆರವಾಗಲಿದ್ದು, ಜೀವನೋಪಾಯಕ್ಕೆ ಅನುಕೂಲವಾಗಲಿದೆ. ಈ ಮೂಲಕ ವರ್ಷಕ್ಕೆ ಕನಿಷ್ಠ ಪಕ್ಷ ₹1 ಲಕ್ಷ ಆದಾಯ ಗಳಿಸಬಹುದಾಗಿದೆ ಎಂದು ಹೇಳಿದ್ದಾರೆ.
ಆಗಸ್ಟ್ 15ರ ತಮ್ಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ, ಡ್ರೋನ್ ತಂತ್ರಜ್ಞಾನದೊಂದಿಗೆ ಸ್ವಸಹಾಯ ಗುಂಪುಗಳಿಗೆ ಶಕ್ತಿ ನೀಡುವುದಾಗಿ ಮೋದಿ ಘೋಷಿಸಿದ್ದರು. ಗ್ರಾಮೀಣ ಅಭಿವೃದ್ಧಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಸಾಮರ್ಥ್ಯವನ್ನು ಹೆಚ್ಚಿಸುವ ವಿಷಯದ ಪ್ರಸ್ತಾಪದ ಸಂದರ್ಭ ಹೇಳಿದ್ದರು.