ನವದೆಹಲಿ: ಜವಾಹರ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ಕುಲಪತಿ ನಿವಾಸದ ಹೊರಗೆ ಪ್ರತಿಭಟನೆ ನಡೆಸಿದ್ದಕ್ಕಾಗಿ ವಿಚಾರಣೆಗೆ ಹಾಜರಾಗುವಂತೆ ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದ ನಾಲ್ವರು ಪ್ರತಿನಿಧಿಗಳು ಮತ್ತು 12 ಹಾಸ್ಟೆಲ್‌ಗಳ ಅಧ್ಯಕ್ಷರಿಗೆ ನೋಟಿಸ್ ಜಾರಿಯಾಗಿದೆ.

ನೋಟಿಸ್ ಜಾರಿಯಾಗಿರುವ 16 ವಿದ್ಯಾರ್ಥಿಗಳು ಇದೇ 7ರಂದು ವಿದ್ಯಾರ್ಥಿ ಶಿಸ್ತುಪಾಲನಾಧಿಕಾರಿ ಸತೀಶ್ ಗರಗೋಟಿ ಅವರ ಎದುರು ವಿಚಾರಣೆಗೆ ಹಾಜರಾಗಬೇಕಿದೆ.
ಕಳೆದ ಸೆಪ್ಟೆಂಬರ್ 19ರಂದು ಕುಲಪತಿ ನಿವಾಸದ ಎದುರು ನಡೆದ ಪ್ರತಿಭಟನೆಯಲ್ಲಿ ಈ ವಿದ್ಯಾರ್ಥಿಗಳು ಭಾಗಿಯಾಗಿದ್ದ ಬಗ್ಗೆ ವಿ.ವಿಯ ಮುಖ್ಯ ಭದ್ರತಾ ಅಧಿಕಾರಿಗೆ ಸಲ್ಲಿಸಿದ ದೂರು ಆಧರಿಸಿ, ವಿಚಾರಣೆಗೆ ಹಾಜರಾಗಲು ನೋಟಿಸ್ ಜಾರಿ ಮಾಡಲಾಗಿದೆ.
'ಕನಿಷ್ಠ ಐದು ಹಾಸ್ಟೆಲ್‌ಗಳಲ್ಲಿ ಹಲವು ದಿನಗಳಿಂದ ನೀರು ಸರಬರಾಜು ಸ್ಥಗಿತಗೊಂಡಿದ್ದಕ್ಕೆ ಜೆಎನ್‌ಯುಎಸ್‌ಯು ಮತ್ತು ಹಾಸ್ಟೆಲ್ ಅಧ್ಯಕ್ಷರು ಕುಲಪತಿಗಳ ನಿವಾಸದ ಎದುರು ಪ್ರತಿಭಟನೆ ನಡೆಸಿದ್ದರು' ಎಂದು ನೋಟಿಸ್ ಸ್ವೀಕರಿಸಿದ ವಿದ್ಯಾರ್ಥಿಗಳಲ್ಲಿ ಒಬ್ಬರಾದ, ಜೆಎನ್‌ಯುಎಸ್‌ಯು ಅಧ್ಯಕ್ಷೆ ಆಯಿಷಿ ಘೋಷ್ ಹೇಳಿದ್ದಾರೆ.
'ಸುಮಾರು 700-800 ವಿದ್ಯಾರ್ಥಿಗಳಿರುವ ಈ ಹಾಸ್ಟೆಲ್‌ಗಳು ಕೆಲವು ದಿನಗಳಿಂದ ನೀರಿನ ಸಮಸ್ಯೆ ಎದುರಿಸುತ್ತಿವೆ. ಪ್ರತಿ ದಿನ ಕೇವಲ ಐದು ಗಂಟೆಗಳ ಕಾಲ ನೀರಿನ ಪೂರೈಕೆ ಇರುತ್ತದೆ' ಎಂದು ಅವರು ತಿಳಿಸಿದ್ದಾರೆ.