HEALTH TIPS

ಕಾಸರಗೋಡು ಕನ್ನಡ ಗ್ರಾಮದಲ್ಲಿ 18ನೇ ರಾಷ್ಟ್ರೀಯ ಕನ್ನಡ ಸಂಸ್ಕøತಿ ಉತ್ಸವ

 

                      

                 ಕಾಸರಗೋಡು: ಹದಿನೆಂಟನೇ ರಾಷ್ಟ್ರೀಯ ಕನ್ನಡ ಸಂಸ್ಕøತಿ ಸಮ್ಮೇಳನ  ಕಾಸರಗೋಡು ಕನ್ನಡ ಗ್ರಾಮದಲ್ಲಿ ನ.26ರಂದು ಜರುಗಲಿದೆ. ಹೃದಯವಾಹಿನಿ, ಮಂಗಳೂರು ಇದರ ನೇತೃತ್ವದಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ(ರಿ ), ಕನ್ನಡ ಗ್ರಾಮ ಕಾಸರಗೋಡು ಇದರ ಸಹಯೋಗದಲ್ಲಿ ಬೆಳಿಗ್ಗೆ ಗಂಟೆ 9:00 ರಿಂದ ರಾತ್ರಿ 9ರ ತನಕ, ಕೇರಳ, ಕರ್ನಾಟಕ ರಾಜ್ಯ ಹಾಗೂ ದೇಶ, ವಿದೇಶಗಳಿಂದ  ಪಾಲ್ಗೊಳ್ಳುವ ಸುಮಾರು 100 ಮಂದಿಯ ಸಾಂಸ್ಕೃತಿಕ ನಿಯೋಗದಲ್ಲಿ  ಕಲಾವಿದರು ಸಾಹಿತಿಗಳು, ಮಾಧ್ಯಮದವರು ಹಾಗೂ ವಿವಿಧ ರಾಜ್ಯಗಳ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.  ಅಂತಾರಾಜ್ಯ ಮಟ್ಟದ ಸಾಂಸ್ಕೃತಿಕ ಕಲಾಪ್ರದರ್ಶನ, ಕವಿಗೋಷ್ಠಿ ವಿಚಾರಗೋಷ್ಠಿ ಪ್ರಶಸ್ತಿ ಪ್ರಧಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ. 

              ಈ ಸಂದರ್ಭದಲ್ಲಿ 18 ಸಮೂಹ ಗಾಯನ ತಂಡಗಳಿಂದ ರಾಷ್ಟ್ರೀಯ ಸಮೂಹ ಗಾಯನ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಸ್ಪರ್ಧೆಯಲ್ಲಿ 18 ಸಮೂಹ ಗಾಯನ ತಂಡಗಳನ್ನು ಆಯ್ಕೆ ಮಾಡಲಾಗುವುದು. ಒಂದು ತಂಡಕ್ಕೆ ಎರಡು ಕನ್ನಡ ಗೀತೆಗಳ ಗಾಯನಕ್ಕೆ  ಅವಕಾಶ ನೀಡಲಾಗುವುದು. ತಂಡದಲ್ಲಿ ಕನಿಷ್ಠ 10 ರಿಂದ 15 ಸದಸ್ಯರಿರಬೇಕು.  ಎಲ್ಲಾ ತಂಡಗಳಿಗೆ ಪ್ರಶಂಸಾ ಪತ್ರ ನೀಡಿ ಗೌರವಿಸಲಾಗುವುದು. ತಂಡದ ಹೆಸರು, ವಿಳಾಸ ಮತ್ತು ಎಲ್ಲಾ ಸದಸ್ಯರ ಹೆಸರು, ವಿಳಾಸ, ಮೊಬೈಲ್ ಸಂಖ್ಯೆಯನ್ನು ಬರೆದು ತರಬೇಕು ಮತ್ತು ವಿವರಗಳನ್ನು ಮುಂಚಿತವಾಗಿ ವಾಟ್ಸಪ್ ಮೂಲಕ ಕಳುಹಿಸಬೇಕು. ಸಂಜೆ 4ಕ್ಕೆ ನಡೆಯುವ ಸಮಾರೋಪ ಕಾರ್ಯಕ್ರಮದಲ್ಲಿ ತೀರ್ಪುಗಾರರಿಂದ ಗುರುತಿಸಲ್ಪಟ್ಟ ತಂಡಗಲಿಗೆ  ನಗದು ಪುರಸ್ಕಾರ ಸ್ಮರಣೆಕೆ  ನೀಡಿ ಗೌರವಿಸಲಾಗುವುದು. 

                     100 ಮಂದಿ ಗಾಯಕರ ಸಮೂಹ ಗಾಯನದೊಂದಿಗೆ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ಜರಗಲಿದೆ. ತಮ್ಮ ತಂಡದ ನೋಂದಣಿಗಾಗಿ, ಶಿವರಾಮ ಕಾಸರಗೋಡು, ಅಧ್ಯಕ್ಷರು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ ),ಕನ್ನಡ ಗ್ರಾಮ, ಕಾಸರಗೋಡು -671121(ವಾಟ್ಸಪ್ ಮೊಬೈಲ್:-9448572016)ಇವರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries