ಕಾಸರಗೋಡು: ಸರ್ಕಾರದ ಅಭಿವೃದ್ಧಿ ಸಾಧನೆಗಳು, ಭವಿಷ್ಯದ ಯೋಜನೆಗಳ ಕುರಿತಾಗಿ ಸಆರ್ವಜನಿಕರೊಂದಿಗೆ ಸಂವಾದ ನಡೆಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಹಮ್ಮಿಕೊಂಡಿರುವ ನವಕೇರಳ ಸಮಾವೇಶ ಕಾಸರಗೋಡು ಜಿಲ್ಲೆಯಲ್ಲಿ ನ. 18 ಹಾಗೂ 19ರಂದು ನಡೆಯಲಿದೆ. ಇದರ ಜಿಲ್ಲಾಮಟ್ಟದ ಉದ್ಘಾಟನೆ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಪೈವಳಿಕೆಯ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ ಮೈದಾನದಲ್ಲಿ ವಿಶೇಷವಾಗಿ ಸಜ್ಜುಗೊಳಿಸಲಾದ ವೇದಿಕೆಯಲ್ಲಿ ನ. 18ರಂದು ಮಧ್ಯಾಹ್ನ 3.30ಕ್ಕೆ ರಾಜ್ಯದ ಮುಖ್ಯ ಮಂತ್ರಿ ಪಿಣರಾಯಿ ವಿಜಯನ್ ಅವರು ಸಚಿವ ಸಂಪುಟದ ಎಲ್ಲ ಸಚಿವರ ಉಪಸ್ಥಿತಿಯಲ್ಲಿ ರಾಜ್ಯಮಟ್ಟದ ಉದ್ಘಾಟನೆಯನ್ನು ನೆರವೇರಿಸಲಿರುವುದಾಗಿ ಕಾಸರಗೋಡು ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಸುದ್ದಿಗೊಷ್ಠೀಯಲ್ಲಿ ತಿಳಿಸಿದ್ದಾರೆ.
ಸರ್ಕಾರ ಜನರ ಬಳಿ ತೆರಳುವ ವಿಶಿಷ್ಟ ಯೋಜನೆ ಇದಾಗಿದ್ದು, ನವಕೇರಳ ಸಮಾವೇಶದಲ್ಲಿ ತಮ್ಮ ಅಹವಾಲು ಸಲ್ಲಿಸಲು ಪ್ರತ್ಯೇಕ ಕೌಂಟರ್‍ಗಳನ್ನೂ ತೆರೆಯಲಾಗುವುದು. ಎಲ್ಲ ಇಲಾಖೆಗಳಿಗೆ ಸಂಬಂಧಿಸಿದ ದೂರು, ಮನವಿಗಳನ್ನು ಸವೀಕರಿಸಲಾಗುವುದು. ಜಿಲ್ಲೆಯ ಅಭಿವೃದ್ಧಿ ಬಗ್ಗೆ ಸಮಗ್ರ ಮಾಹಿತಿಯನ್ನು ಕ್ರೋಢೀಕರಿಸಲಾಗುವುದು. ಮಧ್ಯಾಹ್ನ 2ಗಂಟೆಗೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ವಿಧಾನಸಭಾ ಕ್ಷೇತ್ರದ 15ಸಾವಿರಕ್ಕೂ ಹೆಚ್ಚುಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. 3.30ಕ್ಕೆ ಮುಖ್ಯಮಂತ್ರಿ ಪಿಣರಾಯಿ ಜಯನ್ ಸಮಾರಂಭ ಉದ್ಘಾಟಿಸುವರು.
ನಂತರ ಕನ್ನಡ-ಮಲಯಾಳ ಚಿತ್ರನಟರನ್ನೊಳಗೊಂಡ ತಂಡದಿಂದ ಕಾರ್ಯಕ್ರಮ ವೈವಿಧ್ಯ, ಜಾನಪದ ಹಾಡು, ನೃತ್ಯ, ಸಮೂಹ ಗಾಯನ ಸೇರಿದಂತೆ ನಾನಾ ಸಾಂಸ್ಕøತಿಕ ಕಾರ್ಯಕ್ರಮ ಜರುಗಲಿರುವುದು. 19ರಂದು ಬೆಳಗ್ಗೆ 9ಕ್ಕೆ ಕಾಸರಗೋಡು ನಗರಸಭಾಂಗಣದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದಲ್ಲಿ ಜಿಲ್ಲೆಯ ಪ್ರಮುಖರನ್ನೊಳಗೊಂಡ ಪ್ರಭಾತ ಸಭೆ ನಡೆಯುವುದು. 11ಕ್ಕೆ ಚೆರ್ಕಳದಲ್ಲಿ ಕಾಸರಗೋಡು ವಿಧಾನಸಭಾ ಕ್ಷೇತ್ರದ ನವಕೇರಳ ಸಮಾವೇಶ, ಮಧ್ಯಾಹ್ನ 3ಕ್ಕೆ ಉದುಮ ವಿಧಾನಸಭಾ ಕ್ಷೇತ್ರದ ನವಕೇರಳ ಸಮಾವೇಶ, 4.30ಕ್ಕೆ ಕಾಞಂಗಾಡು ವಿಧಾನಸಭಾ ಕ್ಷೇತ್ರದ ನವಕೇರಳ ಸಮಾವೇಶ, 6ಕ್ಕೆ ತೃಕ್ಕರಿಪುರ ವಿಧಾನಸಭಾ ಕ್ಷೇತ್ರದ ನವಕೇರಳ ಸಮಾವೇಶ ನಡೆಯಲಿರುವುದಾಗಿ ತಿಳಿಸಿದರು.
ಜಿಲ್ಲಾ ಪಂಚಾಐಇತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಉಪಾಧ್ಯಕ್ಷ ಶಾನವಾಜ್ ಪಾದೂರು, ಅಪರ ಜಿಲ್ಲಾಧಿಕಾರಿ ಸೂಫಿಯಾನ್ ಅಹಮ್ಮದ್, ಆರ್‍ಡಿಓ ಅತುಲ್ ಸ್ವಾಮಿನಾಥನ್, ಕೆ.ಆರ್ ಜಯಾನಂದ ಉಪಸ್ಥಿತರಿದ್ದರು.