ನವದೆಹಲಿ: ಕೋವಿಡ್-19 ಸೋಂಕಿಗೆ ಒಳಗಾಗಿ ಮೃತಪಟ್ಟ ಪೊಲೀಸ್ ಕಾನ್‌ಸ್ಟೆಬಲ್ ಕುಟುಂಬಕ್ಕೆ ನಾಲ್ಕು ವಾರಗಳಲ್ಲಿ ₹ 1 ಕೋಟಿ ಎಕ್ಸ್ ಗ್ರೇಷಿಯಾ(ಸ್ವಯಂಪ್ರೇರಿತ ಪಾವತಿ) ಪರಿಹಾರವನ್ನು ಬಿಡುಗಡೆ ಮಾಡುವಂತೆ ದೆಹಲಿ ಹೈಕೋರ್ಟ್ ಸೋಮವಾರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ನವದೆಹಲಿ: ಕೋವಿಡ್-19 ಸೋಂಕಿಗೆ ಒಳಗಾಗಿ ಮೃತಪಟ್ಟ ಪೊಲೀಸ್ ಕಾನ್‌ಸ್ಟೆಬಲ್ ಕುಟುಂಬಕ್ಕೆ ನಾಲ್ಕು ವಾರಗಳಲ್ಲಿ ₹ 1 ಕೋಟಿ ಎಕ್ಸ್ ಗ್ರೇಷಿಯಾ(ಸ್ವಯಂಪ್ರೇರಿತ ಪಾವತಿ) ಪರಿಹಾರವನ್ನು ಬಿಡುಗಡೆ ಮಾಡುವಂತೆ ದೆಹಲಿ ಹೈಕೋರ್ಟ್ ಸೋಮವಾರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ನ.3ರಂದು ದೆಹಲಿ ಸರ್ಕಾರ ಹೊರಡಿಸಿದ ಆದೇಶದ ಪ್ರಕಾರ, 'ಮೃತ ಕಾನ್‌ಸ್ಟೆಬಲ್ ಅಮಿತ್ ಕುಮಾರ್ ಅವರ ಪತ್ನಿ ಮತ್ತು ತಂದೆಗೆ ಪರಿಹಾರವನ್ನು ಪಾವತಿಸಲಾಗುವುದು' ಎಂದು ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್ ಹೇಳಿದ್ದಾರೆ. ಆದೇಶದ ಪ್ರಕಾರದ ಮೊತ್ತವನ್ನು ನಾಲ್ಕು ವಾರಗಳಲ್ಲಿ ಬಿಡುಗಡೆ ಮಾಡಬೇಕು ಎಂದು ನ್ಯಾಯಾಲಯ ಆದೇಶಿಸಿದೆ.
ಆದೇಶದಲ್ಲಿ, 2020ರ ಮೇ 13ರಂದು ನಡೆದ ಸಂಪುಟ ಸಭೆಯ ನಿರ್ಧಾರದ ಪ್ರಕಾರ ಮೃತರ ಪತ್ನಿ ಮತ್ತು ತಂದೆಗೆ ಕ್ರಮವಾಗಿ ₹60 ಲಕ್ಷ ಮತ್ತು ₹40 ಲಕ್ಷ ಬಿಡುಗಡೆ ಮಾಡಲು ಸರ್ಕಾರ ಅನುಮೋದನೆ ನೀಡಿದೆ.
ದೆಹಲಿ ಸರ್ಕಾರದ ಪರ ವಾದ ಮಂಡಿಸಿದ ವಕೀಲ ಅರುಣ್ ಪನ್ವಾರ್, ಅಧಿಕಾರಿಗಳು ನಿರ್ದೇಶನವನ್ನು ಪಾಲಿಸುತ್ತಾರೆ ಎಂದು ಹೇಳಿದ್ದಾರೆ.
ಕೋವಿಡ್-19 ಲಾಕ್‌ಡೌನ್ ನಿಯಮ ಪಾಲನೆಗಾಗಿ ದೆಹಲಿ ಪೊಲೀಸ್ ಕಾನ್‌ಸ್ಟೆಬಲ್ ಅಮಿತ್ ಕುಮಾರ್ ಅವರನ್ನು ದೀಪ್ ಚಂದ್ ಬಂಧು ಆಸ್ಪತ್ರೆಯಲ್ಲಿ ನಿಯೋಜಿಸಲಾಗಿತ್ತು. 2020ರ ಮೇ 5ರಂದು ಅವರು ಸೋಂಕಿಗೆ ಬಲಿಯಾಗಿದ್ದರು.
2020ರ ಮೇ 7ರಂದು ಟ್ವೀಟ್ ಮಾಡಿದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, 'ಅಮಿತ್ (ಕಾನ್‌ಸ್ಟೆಬಲ್) ತಮ್ಮ ಪ್ರಾಣದ ಬಗ್ಗೆ ಕಾಳಜಿ ವಹಿಸದೆ, ದೆಹಲಿಯ ಜನರಿಗಾಗಿ ಸೇವೆ ಸಲ್ಲಿಸುತ್ತಿದ್ದರು. ಕೊರೋನಾ ಸೋಂಕಿಗೆ ಒಳಗಾಗಿ ಅವರು ನಿಧನರಾದರು. ದೆಹಲಿಯ ಎಲ್ಲಾ ಜನರ ಪರವಾಗಿ ನಾನು ಅವರಿಗೆ ಗೌರವ ಸಲ್ಲಿಸುತ್ತೇನೆ. ಅವರ ಕುಟುಂಬಕ್ಕೆ ₹1 ಕೋಟಿ ಪರಿಹಾರ ನೀಡಲಾಗುವುದು' ಎಂದು ಘೋಷಿಸಿದ್ದರು.