ತಿರುವನಂತಪುರ: ಡಿಸೆಂಬರ್ ತಿಂಗಳಲ್ಲೂ ರಾಜ್ಯ ಸರ್ಕಾರ ವಿದ್ಯುತ್ ಹೆಚ್ಚುವರಿ ಶುಲ್ಕವನ್ನು ಕಡಿತಗೊಳಿಸಲು ತೀರ್ಮಾನಿಸಿಲ್ಲ. ಮುಂದಿನ ತಿಂಗಳೂ 19 ಪೈಸೆಯಲ್ಲೇ ಹೆಚ್ಚುವರಿ ಶುಲ್ಕ ಮುಂದುವರಿಸಲು ತೀರ್ಮಾನಿಸಿರುವುದಾಗಿ ಮಾಹಿತಿ ಹೊರಬರುತ್ತಿದೆ.
ನಿಯಂತ್ರಣ ಆಯೋಗದಿಂದ ಮಂಜೂರಾದ 9 ಪೈಸೆ ಲೆವಿ ಹೊರತುಪಡಿಸಿ ಪ್ರತಿ ಯೂನಿಟ್ ಗೆ 10 ಪೈಸೆಯನ್ನು ಸ್ವಂತವಾಗಿ ವಿಧಿಸಲು ಕೆಎಸ್ ಇಬಿ ಅಧಿಸೂಚನೆ ಹೊರಡಿಸಿದೆ.
ಅಕ್ಟೋಬರ್ ವರೆಗೆ ಹೊರಗಿನಿಂದ ಖರೀದಿಸಿದ ವಿದ್ಯುತ್ ನ ಹೆಚ್ಚುವರಿ ವೆಚ್ಚವನ್ನು ಮುಂದಿನ ತಿಂಗಳು ಹಾಗು ಜನವರಿ ವರೆಗೆ ವಸೂಲಿ ಮಾಡಲಾಗುತ್ತದೆ. 85.05 ಕೋಟಿ ಹೆಚ್ಚುವರಿ ವೆಚ್ಚ ಬಂದಿದೆ. ವಿದ್ಯುತ್ ದರ ಹೆಚ್ಚಳದ ಜತೆಗೆ ಈಗ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತಿದೆ.