ಗಾಜಾ: ಗಾಜಾದಲ್ಲಿನ ಜಬಾಲಿಯಾ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ಸೇನೆ ದಾಳಿ ನಡೆಸಿದ್ದು ಕನಿಷ್ಠ 195 ಪ್ಯಾಲೆಸ್ಟೀನ್ ನಾಗರಿಕರು ಮೃತಪಟ್ಟಿದ್ದಾರೆ, 120 ಜನ ನಾಪತ್ತೆಯಾಗಿದ್ದಾರೆ, ಅಲ್ಲದೆ 700ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ಹಮಾಸ್ ನಡೆಸುತ್ತಿರುವ ಸರ್ಕಾರ ಹೇಳಿದೆ ಎಂದು ಗಾಜಾದಲ್ಲಿನ ಮಾಧ್ಯಮ ವರದಿ ತಿಳಿಸಿದೆ.
ಇಸ್ರೇಲ್-ಹಮಾಸ್ ಯುದ್ಧ ಶುರುವಾದ ನಂತರದಲ್ಲಿ, ಗಾಜಾ ಪಟ್ಟಿಯಲ್ಲಿ ಇರುವ ವಿದೇಶಿ ಪ್ರಜೆಗಳಿಗೆ ಆ ಪ್ರದೇಶವನ್ನು ತೊರೆಯಲು ಇದೇ ಮೊದಲ ಬಾರಿಗೆ ಅವಕಾಶ ಕಲ್ಪಿಸಲಾಗಿದೆ. ಗುರುವಾರವೂ ನೂರಾರು ವಿದೇಶಿಗರ ಸ್ಥಳಾಂತರಕ್ಕಾಗಿ ರಫಾ ಗಡಿಯನ್ನು ತೆರೆಯಲಾಗಿದೆ.
ಆಸ್ಟ್ರೇಲಿಯಾ. ಆಸ್ಟ್ರೀಯಾ, ಬಲ್ಗೇರಿಯಾ, ಫಿನ್‌ಲೆಂಡ್, ಇಂಡೊನೇಷ್ಯಾ, ಜಪಾನ್, ಜೋರ್ಡಾನ್ ಸೇರಿದಂತೆ ಹಲವು ದೇಶಗಳ ಪಾಸ್‌ಪೋರ್ಟ್ ಹೊಂದಿರುವವರು ಗಾಜಾದಿಂದ ಸ್ಥಳಾಂತರಗೊಳ್ಳುತ್ತಿದ್ದಾರೆ.
10 ಸಾವಿರಕ್ಕೂ ಹೆಚ್ಚು ಸಾವು
ಯುದ್ಧ ಶುರುವಾದ ನಂತರದಲ್ಲಿ ಗಾಜಾ ಪಟ್ಟಿಯಲ್ಲಿ 8,525ಕ್ಕೂ ಹೆಚ್ಚು ಪ್ಯಾಲೆಸ್ಟೀನ್ ನಾಗರಿಕರು ಮೃತಪಟ್ಟಿದ್ದಾರೆ.
ವೆಸ್ಟ್ ಬ್ಯಾಂಕ್ ಪ್ರದೇಶದಲ್ಲಿ 122ಕ್ಕೂ ಹೆಚ್ಚು ಪ್ಯಾಲೆಸ್ಟೀನ್ ನಾಗರಿಕರು ಸತ್ತಿದ್ದಾರೆ. ಇಸ್ರೇಲ್‌ನಲ್ಲಿ ಒಟ್ಟು 1,400ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.