ಕುಂಬಳೆ: ಕುಂಬಳೆ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ 1999 - 2000 ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ತಂಡದ ಪುನರ್ ಮಿಲನ 'ಇನ್ನೊಂದು ಬಾರಿ' ನ.26 ರಂದು ಕುಂಬಳೆ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ವಿಸ್ತೃತ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಸಂಘಟಕರು ಕುಂಬಳೆ ಪ್ರೆಸ್ ಪೋರಂನಲ್ಲಿ ಸೋಮವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರನ್ನು ಸನ್ಮಾನಿಸಲಾಗುವುದು. ನಂತರ ವಿದ್ಯಾರ್ಥಿಗಳ ಕುಟುಂಬ ಕೂಟ ಹಾಗೂ ಮಕ್ಕಳ ಕಲಾ ಕಾರ್ಯಕ್ರಮಗಳು ನಡೆಯಲಿವೆ. ಸಂಗಮದ ಅಂಗವಾಗಿ ಚಾರಿಟಿ ಚಟುವಟಿಕೆಗಳನ್ನೂ ನಡೆಸಲಾಗುವುದು.
ಈ ಸಂದರ್ಭ ಖ್ಯಾತ ಚಾರಿಟಿ ಕಾರ್ಯಕರ್ತ ಖಯ್ಯೂಮ್ ಮಾನ್ಯ ಕಾರ್ಯಕ್ರಮದ ಲಾಂಛನ ಬಿಡುಗಡೆ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟನಾ ಸಲಹಾ ಸಮಿತಿ ಅಧ್ಯಕ್ಷ ಮನೋಜ್ ಮಾಸ್ತರ್, ಸಂಯೋಜಕ ಅಬ್ದುಲ್ ರೆಹಮಾನ್ ಕೋಹಿನೂರ್, ಹಣಕಾಸು ಕಾರ್ಯದರ್ಶಿ ಅಬ್ದುಲ್ ಲತೀಫ್ ಕೊಡ್ಯಮೆ, ಪ್ರಚಾರ ಸಂಯೋಜಕ ಸವಾದ್ ತಾಜ್, ಸದಸ್ಯರಾದ ಸಿದ್ದೀಕ್ ಬಂಬ್ರಾಣ, ಮುನೀರ್ ಬಂಬ್ರಾಣ ಉಪಸ್ಥಿತರಿದ್ದರು.