ಕಾಸರಗೋಡು: ಭಾರತೀಯ ಪ್ರಕೃತಿ ಕೃಷಿ ಯೋಜನೆ, ಕೇಂದ್ರ ಕೃಷಿ ಇಲಾಖೆ, ಕೃಷಿ ಮತ್ತು ಕಲ್ಯಾಣ ಇಲಾಖೆ ಮತ್ತು ಕೇರಳ ಕೃಷಿ ಅಭಿವೃದ್ಧಿ ಮತ್ತು ರೈತರ ಕಲ್ಯಾಣ ಇಲಾಖೆ ಆಯೋಜಿಸಿದ್ದ ಪರಪ್ಪ ಬ್ಲಾಕ್ ಮಟ್ಟದ ಕಿಸಾನ್ ಮೇಳ 'ನಿಸರ್ಗ-2023'ಕಳ್ಳಾರ್‍ನಲ್ಲಿ ಜರುಗಿತು.
ಸಂಸದ ರಾಜಮೋಹನ್ ಉಣ್ಣಿತ್ತಾನ್ ಸಮಾರಂಭ ಉದ್ಘಾಟಿಸಿದರು. ಜಿಲ್ಲೆಯ ವಿವಿಧ ಸಾವಯವ ಕೃಷಿ ಯೋಜನೆಗಳ ಬಗ್ಗೆ ಮಾಹಿತಿ, ಹೊಸ ಕೃಷಿ ತಂತ್ರಜ್ಞಾನಗಳ ಮೌಲ್ಯಮಾಪನ ಮತ್ತು ಘೋಷಣೆಗೆ ಕಿಸಾನ್ ಮೇಳವು ವೇದಿಕೆಯಾಯಿತು. ಕಳ್ಳಾರ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಟಿ. ಕೆ.ನಾರಾಯಣನ್ ಅಧ್ಯಕ್ಷತೆ ವಹಿಸಿದ್ದರು.
ಶಾಸಕ ಇ.ಚಂದ್ರಶೇಖರನ್ ರಾಜ್ಯ ಯೋಜನೆಯಾದ ಬೆಳೆ ಆರೋಗ್ಯ ಚಿಕಿತ್ಸಾಲಯದ ನವೀಕರಣ ಯೋಜನೆಯನ್ನು ಉದ್ಘಾಟಿಸಿದರು. ಉಪ ಕೃಷಿ ನಿರ್ದೇಶಕ ರಾಘವೇಂದ್ರ ಯೋಜನೆ ಬಗ್ಗೆ ಮಾಹಿತಿ ನೀಡಿದರು. ಬ್ಲಾಕ್ ಪಂಚಾಯಿತಿ ಉಪಾಧ್ಯಕ್ಷ ಕೆ.ಭೂಪೇಶ್ ವಿವಿಧ ಸೇವಾ ಕೇಂದ್ರಗಳನ್ನು ಉದ್ಘಾಟಿಸಿದರು. ಪನತ್ತಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಸನ್ನ ಪ್ರಸಾದ್, ಜಿಲ್ಲಾ ಪಂಚಾಯತ್ ಸದಸ್ಯ ಶಿನೋಜ್ ಚಾಕೋ, ಕಳ್ಳಾರ್ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಪ್ರಿಯಾ ಶಾಜಿ, ಪರಪ್ಪ ಬ್ಲಾಕ್ ಪಂಚಾಯತ್ ಅಭಿವೃದ್ಧಿ ವ್ಯವಹಾರಗಳ ಸ್ಥಾಯಿ ಸಮಿತಿಅಧ್ಯಕ್ಷೆ ರಜನಿ ಕೃಷ್ಣನ್, ಕಳ್ಳಾರ್ ಗ್ರಾಮ ಪಂಚಾಯಿತಿ ಸ್ಥಾಯಿ ಸಮಿತಿ ಸದಸ್ಯರಾದ ಸಂತೋಷ್ ಚಾಕೋ, ಪಿ.ಗೀತಾ, ರಾಜಕೀಯ ಪಕ್ಷದ ಪ್ರತಿನಿಧಿಗಳಾದ ಶಾಲು ಮ್ಯಾಥ್ಯೂ, ಎಂ.ಎಂ.ಸೈಮನ್, ಬಿ.ರತ್ನಾಕರನ್ ನಂಬಿಯಾರ್, ಸಿ.ಎಂ.ಕುಞಬ್ದುಲ್ಲಾ, ಟಾಮಿ ವಾಜಪಲ್ಲಿ, ಜಕರಿಯಾ, ಲಕ್ಷಣ ಭಟ್, ಕೃಷಿ ಇಲಾಖೆ ನಿರ್ದೇಶಕಿ ತುಳಸಿ ಚೆಂಗಟ್ ಉಪಸ್ಥಿತರಿದ್ದರು.
ಪರಪ್ಪ ಕೃಷಿ ಸಹಾಯಕ ನಿರ್ದೇಶಕ ಟಿ.ಟಿ.ಅರುಣ್ ಸ್ವಾಗತಿಸಿದರು. ಕಳ್ಳಾರ್ ಕೃಷಿ ಅಧಿಕಾರಿ ಕೆ.ಎಂ.ಹಸೀನಾ ವಂದಿಸಿದರು. ಕಿಸಾನ್ ಮೇಳದಲ್ಲಿ ಕೃಷಿ ವಿಚಾರ ಸಂಕಿರಣ, ಚರ್ಚೆ, ಪ್ರದರ್ಶನ, ರಸಪ್ರಶ್ನೆ ಸ್ಪರ್ಧೆ, ಬೆಳೆ ಆರೋಗ್ಯ ಚಿಕಿತ್ಸಾಲಯ, ಮಣ್ಣು ಪರೀಕ್ಷೆ, ಕೃಷಿ ಯಾಂತ್ರೀಕರಣ ನೆರವು ಯೋಜನೆ ಸ್ಮಾಮ್ ನೋಂದಣಿ ಕೌಂಟರ್, ಅನರ್ಟ್ ಉಚಿತ ಸೌರ ಯೋಜನೆ ನೋಂದಣಿ ಮತ್ತು ಪಿಎಂ ಕಿಸಾನ್ ಹೆಲ್ಪ್ ಡೆಸ್ಕ್ ಸೇವೆ ಒದಗಿಸಲಾಗಿತ್ತು.