ಲಂಡನ್: ಐರಿಶ್ ಬರಹಗಾರ ಪೌಲ್ ಲಿಂಚ್ ಅವರು, 2023ನೇ ಸಾಲಿನ ಬೂಕರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಲಿಂಚ್ ಅವರ 'ಪ್ರೊಫೆಟ್ ಸಾಂಗ್' ಎಂಬ ಕಾದಂಬರಿಗೆ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದೆ.
ಲಂಡನ್: ಐರಿಶ್ ಬರಹಗಾರ ಪೌಲ್ ಲಿಂಚ್ ಅವರು, 2023ನೇ ಸಾಲಿನ ಬೂಕರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಲಿಂಚ್ ಅವರ 'ಪ್ರೊಫೆಟ್ ಸಾಂಗ್' ಎಂಬ ಕಾದಂಬರಿಗೆ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದೆ.
ಲಂಡನ್‌ನ ಓಲ್ಡ್ ಬಿಲ್ಲಿಂಗ್ಸ್‌ಗೇಟ್‌ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಳೆದ ವರ್ಷ ಬೂಕರ್ ವಿಜೇತ ಶ್ರೀಲಂಕಾದ ಲೇಖಕ ಶೆಹನ್ ಕರುಣಾತಿಲಕ ಅವರಿಂದ ಲಿಂಚ್, ಟ್ರೋಫಿ ಹಾಗೂ 50 ಸಾವಿರ ಪೌಂಡ್ ನಗದು ಬಹುಮಾನ ಸ್ವೀಕರಿಸಿದರು.
ಪ್ರಶಸ್ತಿಗೆ 163 ಕಾದಂಬರಿಗಳನ್ನು ಆಯ್ಕೆ ಮಾಡಲಾಗಿತ್ತು. ಇದರಲ್ಲಿ ಐರ್ಲೆಂಡ್, ಇಂಗ್ಲೆಂಡ್ ಅಮೆರಿಕಾ ಮತ್ತು ಕೆನಡಾದ ಐವರು ಲೇಖಕರ ಪುಸ್ತಕಗಳು ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದವು.
ಪೌಲ್ ಲಿಂಚ್ ಅವರ 'ಪ್ರೊಫೆಟ್ ಸಾಂಗ್' ಕಾದಂಬರಿ ಲಂಡನ್ ಮೂಲದ ಭಾರತೀಯ ಮೂಲದ ಲೇಖಕಿ ಚೇತನಾ ಮಾರೂ ಅವರ ಚೊಚ್ಚಲ ಕಾದಂಬರಿ 'ವೆಸ್ಟರ್ನ್ ಲೇನ್' ಹಿಂದಿಕ್ಕಿ ಪ್ರಶಸ್ತಿಗೆ ಆಯ್ಕೆಯಾಯಿತು.
ಸರ್ಕಾರ ದಬ್ಬಾಳಿಕೆಯಿಂದ ಆಡಳಿತ ನಡೆಸುತ್ತಿರುವಾಗ ದುರಂತದ ಅಂಚಿನಲ್ಲಿರುವ ಕುಟುಂಬಗಳು ಹಾಗೂ ದೇಶದ ಕಥೆಯನ್ನು ಈ ಕಾದಂಬರಿ ಒಳಗೊಂಡಿದೆ. ಅಲ್ಲದೇ ಕಾದಂಬರಿ ಪಾಶ್ಚಿಮಾತ್ಯ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿನ ಅಶಾಂತಿ, ಸಿರಿಯಾ ಬಿಕ್ಕಟ್ಟಿನಂತಹ ವಿಪತ್ತು ಹಾಗೂ ದಬ್ಬಾಳಿಕೆಯ ನರಕಸದೃಶ್ಯ ಘಟನೆಗಳನ್ನು ಎತ್ತಿ ತೋರಿಸುವ ಯತ್ನ ಮಾಡಿದೆ.
ಲಿಂಚ್ ಅವರು ಬೂಕರ್ ಪ್ರಶಸ್ತಿ ಗೆದ್ದ 5ನೇ ಐರಿಶ್ ಲೇಖಕರಾಗಿದ್ದಾರೆ ಎಂದು ಸ್ಪರ್ಧೆಯ ಸಂಘಟಕರು ತಿಳಿಸಿದ್ದಾರೆ.
ಪ್ರತಿ ವರ್ಷ ಇಂಗ್ಲಿಷ್ ಭಾಷೆಯ ಶ್ರೇಷ್ಠ ಕಾದಂಬರಿಗೆ ಬೂಕರ್ ಪ್ರಶಸ್ತಿಯನ್ನು ನೀಡಲಾಗುತ್ತದೆ.