ಬದಿಯಡ್ಕ: ಕುಂಟಿಕಾನ ಮಠ ಶ್ರೀ ಶಂಕರನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ನವಂಬರ್ 20ರಂದು ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರಿಗೆ ಗುರುಭಿಕ್ಷಾ ಸೇವೆ ಜರಗಲಿದೆ. ನವಂಬರ್ 19ರಂದು ಭಾನುವಾರ ಶ್ರೀಗಳವರ ಆಗಮನ, ಪೂರ್ಣಕುಂಭ ಸ್ವಾಗತ, ಧೂಳೀ ಪಾದುಕಾಪೂಜೆ ನಡೆಯಲಿದೆ. ನ.20ರಂದು ಸೋಮವಾರ ಪ್ರಾತಃಕಾಲ 6 ಕ್ಕೆ ಪಾದುಕಾ ಪೂಜೆ ಪ್ರಾರಂಭ, 8.30ಕ್ಕೆ ಶ್ರೀಪೂಜೆ, ಮಧ್ಯಾಹ್ನ ಶ್ರೀ ಸಂಸ್ಥಾನ ಪೀಠಕ್ಕೆ ಆಗಮನ, ಗುರುವಂದನೆ, ಸಮಿತಿಯವರಿಂದ ಫಲಸಮರ್ಪಣೆ, ಭಿಕ್ಷಾಂಗ ಫಲಸಮರ್ಪಣೆ, ಮಂಗಳಾರತಿ, ಸಾಮೂಹಿಕ ಫಲಸಮರ್ಪಣೆ, ಅಪರಾಹ್ನ ಸಭಾ ಕಾರ್ಯಕ್ರಮ, ಸಭಾಪೂಜೆ, ಪ್ರಸ್ತಾವನೆ, ಕಪ್ಪ ಸಮರ್ಪಣೆ, ಸಾಮೂಹಿಕ ದೇಣಿಗೆ ಸಮರ್ಪಣೆ, ಆಶೀರ್ವಚನ, ಮಂತ್ರಾಕ್ಷತೆಯೊಂದಿಗೆ ಕಾರ್ಯಕ್ರಮ ಸಂಪನ್ನವಾಗಲಿದೆ.
ಕುಂಟಿಕಾನ ಮಠ ಶ್ರೀ ಶಂಕರನಾರಾಯಣ ಸ್ವಾಮೀ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯವು ಅಂತಿಮ ಹಂತದಲ್ಲಿದ್ದು, ಭಕ್ತ ಜನರಿಗೆ ದೇವತಾ ಕಾರ್ಯಕ್ಕೆ ದೇಣಿಗೆಯನ್ನು ಸಮರ್ಪಿಸಲು ಅವಕಾಶವಿದೆ. ವಿವಿಧ ಕಾಮಗಾರಿಗಳು ಈಗಾಗಲೇ ಅಂತಿಮಹಂತದಲ್ಲಿದೆ. ಮುಂದಿನ ಕೆಲಸಗಳನ್ನು ಅತಿಶೀಘ್ರದಲ್ಲಿ ಪೂರೈಸಿ ಶ್ರೀದೇವರನ್ನು ಬಾಲಾಲಯದಿಂದ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸುವ ಕಾರ್ಯ ನಡೆಯಬೇಕಾಗಿದೆ ಎಂದು ಆಡಳಿತ ಮೊಕ್ತೇಸರರು, ಮಠದ ಮನೆಯವರು, ಜೀರ್ಣೋದ್ಧಾರ ಸಮಿತಿ ಕುಂಟಿಕಾನಮಠ ಹಾಗೂ ಕುಂಟಿಕಾನ ಶ್ರೀಶಂಕರನಾರಾಯಣ ಸ್ವಾಮಿ ದೇವಸ್ಥಾನ ಅಭಿವೃದ್ಧಿ ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.