HEALTH TIPS

ನವೆಂಬರ್‌ 21: ಹಲೋ ದಿನ: ಹಲೋ ಎಂಬುವುದು ಸಾಮಾನ್ಯ ವಿಷಯವೇ ಅಲ್ಲ, ಗೊತ್ತಾ?

 ನವೆಂಬರ್ 21ನ್ನು ವಿಶ್ವ ಹಲೋ ದಿನವನ್ನಾಗಿ ಆಚರಿಸಲಾಗುವುದು...ನಮ್ಮೆಲ್ಲಾ ಓದುಗರಿಗೆ ನಮ್ಮ ಕಡೆಯಿಂದ ಹಲೋ....

ಹಲೋ....ಈ ಒಂದು ಪದ ತುಂಬಾನೇ ಪವರ್‌ಫುಲ್ ಎಂದರೆ ತಪ್ಪಾಗಲಾರದು. ಒಂದು ಹಲೋ ಸಾಕು ಒಳ್ಳೆಯ ಗೆಳೆತನ ಶುರುವಾಗಲು, ಒಂದು ಹಲೋ ಸಾಕು ಮುನಿಸುಗಳು ದೂರಾಗಲು, ಒಂದು ಹಲೋ ಸಾಕು ಅಪರಿಚಿತರನ್ನು ಪರಿಚಿತರನ್ನಾಗಿಸಲು, ಹಲೋ ಹೇಳದಿದ್ದರೆ ಸಾಕು ಪರಿಚಿತರನ್ನು ಅಪರಿಚಿತರನ್ನಾಗಿಸಲು, ಹೀಗೆ ಒಂದು ಹಲೋ ಹಲವು ವಿಷಯಗಳನ್ನು ಮಾಡಲು ಅಲ್ವಾ?

ಒಂದು ಹಲೋ ಎಷ್ಟೊಂದು ಬದಲಾವಣೆ ತರುತ್ತದೆ ಎಂದು ನೋಡುವುದಾದರೆ
ಹಲೋ ನಮ್ಮ ನಡುವೆ ಒಳ್ಳೆಯ ಬಾಂಧವ್ಯ ಮೂಡಿಸುತ್ತದೆ: ನಾವು ಆಫೀಸ್‌ಗೆ ಹೋಗುತ್ತೇವೆ, ಅಲ್ಲಿ ನಮ್ಮ ಬಾಸ್‌, ಸಹೋದ್ಯೋಗಿಗಳನ್ನು ನೋಡಿದಾಗ ಅವರನ್ನು ನೋಡಿ ಹಲೋ ಎಂದರೆ ಸಾಕು, ಅವರಿಗೂ ನಮಗೂ ಒಂದು ಒಳ್ಳೆಯ ಬಾಂಧವ್ಯ ಇರುತ್ತದೆ.

ಹಲೋದಿಂದ ಸ್ನೇಹ ಉಂಟಾಗುವುದು: ಯಾವುದೇ ಸ್ನೇಹ ಮೊದಲು ಪ್ರಾರಂಭವಾಗುವುದೇ ಹಲೋದಿಂದ, ನಾವು ಮೊದಲು ಒಬ್ಬರನ್ನು ಪರಿಚಯವಾದಾಗ ಮೊದಲು ನಮ್ಮ ಮಾತು ಪ್ರಾರಂಭವಾಗುವುದು ಹಲೋದಿಂದ, ಆ ಹಲೋ ಇಬ್ಬರ ನಡುವೆ ಸ್ನೇಹ, ಬಾಂಧವ್ಯ ಉಂಟು ಮಾಡುತ್ತದೆ.

ಮುನಿಸು ದೂರ ಮಾಡುತ್ತದೆ: ಸ್ನೇಹಿತರ ನಡುವೆ ಯಾವುದಾದರೂ ಕಾರಣಕ್ಕೆ ಭಿನ್ನಾಭಿಪ್ರಾಯ ಉಂಟಾದರೆ ನಂತರ ಭೇಟಿಯಾದಾಗ ಒಂದು ಹಲೋ ಹೇಳಿದರೆ ಸಾಕು ನಿಮ್ಮ ನಡುವೆ ಎಲ್ಲವೂ ಸರಿಯಾಗುವುದು.

ಅಪರಿಚಿತರನ್ನು ಮಾತನಾಡಿಸಲು ಸಹಾಯ ಮಾಡುತ್ತೆ:
ಒಂದು ಹಲೋ ಹೇಳಿ ನಾವು ಅಪರಿಚಿತರನ್ನು ಮಾತನಾಡಿಸಬಹುದು. ನಮಗೆ ಏನಾದರೂ ಸಹಾಯ ಬೇಕಾದರೆ ಅವರನ್ನು ಹೇಗೆ ಮಾತನಾಡಿಸಬೇಕೆಂಬ ಗೊಂದಲ ನಮ್ಮಲ್ಲಿ ಇದ್ದರೆ ಒಂದು ಹಲೋ ಹೇಳಿ ನಾವು ಅವರನ್ನು ಮಾತನಾಡಿಸಬಹುದು.

ಸ್ಪಾನಿಷ್‌: ಹೋಲಾ
ಫ್ರೆಂಚ್: ಬೊಂಜೌರ್
ಜರ್ಮನ್: ಹಲೊ
ಮ್ಯಾಂಡ್ರೈ ಚೈನೀಸ್: ನಿಹೋ
ಥಾಯ್‌: ಸ್ವಾಸ್ದಿ
ಸ್ವಾಹಿಲ್‌: ಜಂಬೋ
ಇಟಲಿಯನ್‌: ಸಿಯೋ
ಪೋರ್ಚುಗಸ್: ಓಲಾ
ಜುಲು - ಸಾವುಬೊನಾ
ಜಪಾನೀಸ್ - ಕೊನ್ನಿಚಿವಾ
ಅರೇಬಿಕ್ - ಮರ್ಹಬಾನ್
ಬೆಂಗಾಲಿ - ಹಯಾಲೋ
ಮೋಂಗ್ - ನ್ಯೋಬ್ ಮೃಗಾಲಯ
ಫಿಲಿಪಿನೋ - ಕಮುಸ್ತಾ
ಮಾವೋರಿ - ಕಿಯಾ ಓರಾ
ಷೋಸಾ - ಮೊಲ್ವೆನಿ
ವಿಯೆಟ್ನಾಮೀಸ್ - xin chào, ಕ್ಸಿನ್ ಚೌ
ಕೊರಿಯನ್ - ಅನ್ನಿಯೋಂಗ್ಹಸೆಯೊ
ಗ್ರೀಕ್ - ಜಿಯಾ

ಭಾರತದಲ್ಲಿ ವಿವಿಧ ಭಾಷೆಯಲ್ಲಿ ಹಲೋಗೆ ಏನು ಹೇಳುತ್ತಾರೆ
ಹಿಂದಿ: ನಮಸ್ತೆ
ಪಂಜಾಬಿ: ಸತ್ಸ್ರಿಯಾಕಾಲ್
ಒಡಿಯಾ: ನಮಸ್ಕಾರ್
ಬೆಂಗಲಿ: ನಮೋಶ್ಕಾರ್
ಮರಾಠಿ: ನಮಸ್ಕಾರ್‌
ಕನ್ನಡ: ನಮಸ್ಕಾರ
ಮಲಯಾಳಂ: ನಮಸ್ಕಾರಂ
ತಮಿಳು: ವಣಕಂ
ತೆಲುಗು: ನಮಸ್ಕಾರಮು
ಗುಜರಾತಿ: ನಮಸ್ತೆ
ನಾಗ: ಸಲೇಂ
ಉರ್ದು : ಅಸ್ಲಾಂ ಅಲೈಕಂ

ಹಲೋ ದಿನದ ಆಚರಣೆಯ ಹಿಂದಿರುವ ಆಸಕ್ತಿಕರ ವಿಷಯಗಳು

ಈ ವರ್ಷ ಮಂಗಳವಾರದಂದು ಹಲೋ ದಿನವನ್ನು ಆಚರಿಸಲಾಗುವುದು.

ಇತಿಹಾಸ
1970ರಲ್ಲಿ ಈಜಿಪ್ಟ್ ಹಾಗೂ ಇಸ್ರೇಲ್‌ ನಡುವೆ ಪರಿಸ್ಥಿತಿ ತುಂಬಾ ಹದಗೆಟ್ಟಿತ್ತು. ಯೋಮ್ ಕಿಪ್ಪೂರ್ ಯುದ್ಧದಲ್ಲಿ ಸಾವಿರಾರು ಸೈನಿಕರು, ನಾಗರಿಕರು ಸಾವನ್ನಪ್ಪಿದ್ದರು. ಕೆಲವು ಸೈನಿಕರಿಗೆ ತುಂಬಾ ಕ್ರೂರ ಶಿಕ್ಷೆ ನೀಡಿ ಕೊಲ್ಲಲಾಯ್ತು. ಇದಕ್ಕೆ ಪ್ರತಿಕ್ರಿಯಿಸಿ ಮ್ಯಾಕ್‌ಕಾರ್ಮ್ಯಾಕ್‌ ಎಂಬ Ph.D. ವಿದ್ಯಾರ್ಥಿ (Arizona State University) ಮೊದಲ ಬಾರಿಗೆ ವಿಶ್ವ ಹಲೋ ದಿನವನ್ನು ಆಚರಿಸಲಾಯಿತು.

ಮಹತ್ವ
ಈ ದಿನ ಜನರು ಒಂದು ಕಡೆ ಸೇರಿ ಪರಸ್ಪರ ಹಲೋ ಹೇಳುವ ಮೂಲಕ ಇದನ್ನು ಆಚರಿಸುತ್ತಾರೆ. ಈ ದಿನ ಇದುವರೆಗೆ ನಾವು ಮಾತನಾಡಿಸದೆ ಇರುವ 10 ಜನರಿಗೆ ಹಲೋ ಹೇಳಬೇಕು ಎಂಬ ಕಾನ್ಸೆಪ್ಟ್ ಇದೆ. ಇದರಿಂದ ಮಾತುಕತೆ ನಡೆಯುವುದು, ಇದರಿಂದ ಸ್ನೇಹ ಬೆಳೆಯುತ್ತೆ. ಮನುಷ್ಯ-ಮನುಷ್ಯರ ನಡುವೆ ಬಾಂಧವ್ಯ ಹೆಚ್ಚಾಗುವುದು.

ವ್ಯವಹಾರಕ್ಕೂ ಸಹಾಯ ಮಾಡುತ್ತೆ ಹಲೋ
ನಾವು ಯಾವುದಾದರೂ ಅಂಗಡಿಗೆ ಹೋದರೆ ಅವರು ನಮ್ಮನ್ನು ನಮಸ್ಕಾರ ಅಥವಾ ಹಲೋ ಅಂದಾಗ ನಮಗೆ ಅವರ ನಡವಳಿಕೆ ತುಂಬಾನೇ ಇಷ್ಟ ಆಗುವುದು, ನಮಗೂ ಆ ಅಂಗಡಿಯಿಂದ ಏನಾದರೂ ಖರೀದಿಸಬೇಕೆಂದು ಅನಿಸುವುದು, ಅಲ್ಲಿಗೆ ಹೋಗಿರುವುದು ನಮಗೆ ಬೇಕಾದ ವಸ್ತುಗಳನ್ನು ಖರೀದಿಸಲೇ ಆದರೂ ಅಂಗಡಿವ ನಮ್ಮನ್ನು ನೋಡಿ ನಕ್ಕಾಗ ಅಥವಾ ಹಲೋ ಹೇಳಿದಾಗ ಖುಷಿಯಾಗುವುದು, ಇಲ್ಲದಿದ್ದರೆ ಇವನು ಮಾತ್ರ ಅಂಗಡಿ ಇಟ್ಟಿರುವುದಾ ಅಂತ ಬೇರೆ ಅಂಗಡಿಗೆ ಹೋಗುತ್ತೇವೆ, ನಿಜ ತಾನೆ?

ಶುಭಾಶಯಗಳು:
* ಹಲೋ ದಿನಕ್ಕೆ ನಿಮಗೊಂದು ಹಲೋ ಹೇಳುತ್ತಾ.... ನಿಮ್ಮ ಬದುಕು ಸುಂದರವಾಗಿರಲಿ ಎಂಬುವುದೇ ನಮ್ಮ ಹಾರೈಕೆ

* ಒಂದು ಹಲೋದಿಂದ ಶುರುವಾದ ಸ್ನೇಹ ಇಂದು ನಮ್ಮಿಬ್ಬರ ನಡುವೆ ಒಂದು ಉತ್ತಮ ಬಾಂಧವ್ಯ ಮೂಡಿಸಿದೆ , ಇಬ್ಬರು ಸೇರಿ ಹಲೋಗೆ ಹೇಳೋಣ ಥ್ಯಾಂಕ್ಸ್.

* ಹಲೋ ಎಂದರೆ ಅದಕ್ಕೆ ಪ್ರತಿಕ್ರಿಯಿಸದೆ ಇರುವವ ಮನುಷ್ಯನಾಗಲು ಸಾದ್ಯನೇ ಇಲ್ಲ

* ಅಪರಿಚಿತರು ಪರಿಚಿತರಾಗಲು ಬೇಕು ಹಲೋ..

* ನಮ್ಮ ನಮಸ್ತೆ ಅಥವಾ ಹಲೋ ಬೇರೆಯವರಲ್ಲಿ ಧನಾತ್ಮಕ ಭಾವನೆ ಮೂಡಿಸುತ್ತೆ, ಆದ್ದರಿಂದ ಯಾರನ್ನಾದರೂ ಕಂಡಾಗ ಹೇಳೋಣ ಹಲೋ...



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries