ಕಾಸರಗೋಡು: ಅಂತಾರಾಷ್ಟ್ರೀಯ ಬೇಕಲ್ ಬೀಚ್ ಫೆಸ್ಟ್ ಎರಡನೇ ಆವೃತ್ತಿಯ ಸ್ವಾಗತ ಸಮಿತಿಯ ಕಚೇರಿಯನ್ನು ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಉದ್ಘಾಟಿಸಿದರು. ಬೇಕಲ ಬೀಚ್ ಪಾರ್ಕ್‍ನಲ್ಲಿ ಸ್ವಾಗತ ಸಮಿತಿ ಕಚೇರಿ ಕಾರ್ಯನಿರ್ವಹಿಸಲಿದೆ.
ಪಳ್ಳಿಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಕುಮಾರನ್ ಅಧ್ಯಕ್ಷತೆ ವಹಿಸಿದ್ದರು. ಸ್ವಾಗತ ಸಮಿತಿಯ ಅಧ್ಯಕ್ಷರೂ ಆದ ಶಾಸಕ ಸಿ.ಎಚ್ ಕುಞಂಬು, ಕಾಞಂಗಾಡ್ ಬ್ಲಾಕ್ ಪಂಚಾಯತ್ ಅಧ್ಯಕ್ಷ ಕೆ.ಮಣಿಕಂಠನ್, ಮಾಜಿ ಶಾಸಕ ಕೆ.ಕುಞÂರಾಮನ್, ಕೇರಳ ಪೂರಕಳಿ ಅಕಾಡೆಮಿ ಅಧ್ಯಕ್ಷ, ಬಿಆರ್‍ಡಿಸಿ ವ್ಯವಸ್ಥಾಪಕ ನಿರ್ದೇಶಕ ಪಿ.ಶಿಜಿನ್, ಡಿ.ವೈ.ಎಸ್.ಪಿ. ಗಿರೀಶ್ ಕುಮಾರ್ ಬೇಕಲ್, ಬೇಕಲ ಠಾಣೆ ಇನ್ಸ್ಪೆಕ್ಟರ್ ಯು. ವಿಪಿನ್, ಸ್ವಾಗತ ಸಮಿತಿ ಪದಾಧಿಕಾರಿಗಳಾದ ಹಕೀಂ ಕುನ್ನಿಲ್, ಕೆಇಎ ಬಕರ್, ಕೆ. ರವಿವರ್ಮನ್, ಎಂ.ಗೌರಿ, ವಿ. ಗೀತಾ, ಸುಕುಮಾರನ್ ಪೂಚ್ಕಾಡ್, ವಿ.ವಿ.ಸುಕುಮಾರನ್, ಕುಞÂರಾಮನ್, ಪಿ.ವಿ. ಪದ್ಮರಾಜನ್, ಕೆ. ನಿಸಾರ್, ಮಾಧವ ಬೇಕಲ್ ಮೊದಲಾದವರು ಉಪಸ್ಥಿತರಿದ್ದರು.
ಬೀಚ್ ಪಾರ್ಕ್‍ನಲ್ಲಿ ನಡೆದ ಸಂಘಟನಾ ಸಮಿತಿ ಕಾರ್ಯಕಾರಿ ಸಭೆಯಲ್ಲಿ ಬೇಕಲ್ ಅಂತರಾಷ್ಟ್ರೀಯ ಬೀಚ್ ಉತ್ಸವದ ಸಿದ್ಧತೆಗಳನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಲು ನಿರ್ಧರಿಸಲಾಯಿತು ಕುಟುಂಬಶ್ರೀ, ಹಸಿರು ಕ್ರಿಯಾ ಸೇನೆ ಸದಸ್ಯರು ಬೇಕಲ್ ಫೆಸ್ಟ್‍ನ ಟಿಕೆಟ್ ಮಾರಾಟ ನಿರ್ವಹಿಸಲಿದ್ದಾರೆ. ಉತ್ಸವದಲ್ಲಿ ಪ್ರವಾಸೋದ್ಯಮ ಮಳಿಗೆ ಮತ್ತು ಮಾಹಿತಿ ಕೇಂದ್ರ ಸ್ಥಾಪಿಸಲಾಗುವುದು. ಕೈಗಾರಿಕೆ ಇಲಾಖೆ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಹಿಂದುಳಿದ ಕಲ್ಯಾಣ ನಿಗಮ ಮತ್ತು ಕುಟುಂಬಶ್ರೀ ಮಳಿಗೆಗಳನ್ನು ಸಹ ಸ್ಥಾಪಿಸಲಾಗುವುದು. ವಿವಿಧ ದಿನಗಳಲ್ಲಿ ಗಣ್ಯ ಸಾಂಸ್ಕøತಿಕ ಕಾರ್ಯಕರ್ತರು, ರಾಜಕೀಯ ಮುಖಂಡರು ಮತ್ತು ಸಾರ್ವಜನಿಕ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.