ತಿರುವನಂತಪುರಂ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ಟ್ಬಿ.ಎಸ್.ಸಿ) ನಡೆಸುವ ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆಗೆ (ಸಿ-ಟೆಟ್) ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಕೇರಳದಲ್ಲಿ ಪರೀಕ್ಷಾ ಕೇಂದ್ರಗಳು ತಿರುವನಂತಪುರಂ, ಎರ್ನಾಕುಳಂ, ಕೋಯಿಕ್ಕೋಡ್‍ನಲ್ಲಿರಲಿವೆ. ಅಭ್ಯರ್ಥಿಗಳು ವೆಬ್‍ಸೈಟ್ ತಿತಿತಿ.ಛಿಣeಣ.ಟಿiಛಿ.iಟಿ ಮೂಲಕ ಅರ್ಜಿ ಸಲ್ಲಿಸಬಹುದು.
8ನೇ ತರಗತಿವರೆಗಿನ ಶಾಲಾ ಶಿಕ್ಷಕರ ಅರ್ಹತೆಯನ್ನು ನಿರ್ಧರಿಸಲು ಸಿ.ಬಿ.ಎಸ್. ಸಿ ಯು ಸಿ-ಟೆಟ್ ಅನ್ನು ನಡೆಸುತ್ತದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 23 ವರೆಗಿರಲಿದೆ. ಪರೀಕ್ಷೆಯು 21 ಜನವರಿ 2024 ರಂದು ನಡೆಯಲಿದೆ.
ಜನರಲ್, ಒ.ಬಿ.ಸಿ. ವಿಭಾಗಗಳಿಗೆ ಅರ್ಜಿ ಶುಲ್ಕ ಒಂದು ಪತ್ರಿಕೆಗೆ ರೂ.1,000 ಮತ್ತು ಎರಡು ಪತ್ರಿಕೆಗಳಿಗೆ ರೂ.1,200. ಅಂಗವಿಕಲರು/ಎಸ್.ಸಿ/ಎಸ್.ಟಿ ವಿಭಾಗಗಳಿಗೆ ಶುಲ್ಕ ಒಂದು ಪತ್ರಿಕೆಗೆ ರೂ.500 ಮತ್ತು ಎರಡು ಪತ್ರಿಕೆಗಳಿಗೆ ರೂ.600.
ಪರೀಕ್ಷೆಯ ಅವಧಿ ಎರಡೂವರೆ ಗಂಟೆಗಳು. ಅದರಲ್ಲಿ ಎರಡು ಪೇಪರ್‍ಗಳಿವೆ. ಎರಡೂ ಪತ್ರಿಕೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎರಡೂ ಪರೀಕ್ಷೆಗಳಿಗೆ ಹಾಜರಾಗಬೇಕು. 6ರಿಂದ 8ನೇ ತರಗತಿಗೆ ಅರ್ಜಿ ಸಲ್ಲಿಸಿದವರಿಗೆ ಬೆಳಗ್ಗೆ ಪತ್ರಿಕೆ-2 ಹಾಗೂ ಮಧ್ಯಾಹ್ನ 1ರಿಂದ 5ನೇ ತರಗತಿವರೆಗೆ ಪೇಪರ್-1 ಪರೀಕ್ಷೆ ನಡೆಯಲಿದೆ.