ಕಾಸರಗೋಡು : ಮಣ್ಣು ಪರಿಶೋಧನೆ ಮತ್ತು ಮಣ್ಣು ಸಂರಕ್ಷಣೆ ಇಲಾಖೆ ವತಿಯಿಂದ ವಿಶ್ವ ಮಣ್ಣು ಸಂರಕ್ಷಣಾ ದಿನಾಚರಣೆ ಅಂಗವಾಗಿ ಜಿಲ್ಲೆಯ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ವಾಟರ್ ಕಲರ್ ಚಿತ್ರಕಲೆ ಹಾಗೂ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ನ.25 ರಂದು ಬೆಳಗ್ಗೆ 10.30ಕ್ಕೆ ವೆಳ್ಳರಿಕುಂಡು ತಾಲೂಕಿನ ಮಕ್ಕಳಿಗಾಗಿ ವೆಳ್ಳರಿಕುಂಡ್‍ನಲ್ಲಿ, ಹೊಸದುರ್ಗ ತಾಲೂಕಿನ ಮಕ್ಕಳಿಗೆ ಸರ್ಕಾರಿ ಎಚ್.ಎಸ್.ಎಸ್ ಹೊಸದುರ್ಗದಲ್ಲಿ, ಮಂಜೇಶ್ವರ, ಕಾಸರಗೋಡು ತಾಲೂಕಿನ ಮಕ್ಕಳಿಗೆ ಕಾಸರಗೋಡು ಬಿ.ಇ.ಎಂ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಸ್ಪರ್ಧೆ ನಡೆಯಲಿದೆ. ಅಂದು ಬೆಳಗ್ಗೆ 10ಕ್ಕೆ ನೋಂದಾವಣೆ ಆರಂಭವಾಗಲಿದೆ. ಭಾಗವಹಿಸುವ ಮಕ್ಕಳು ಮುಖ್ಯೋಪಾಧ್ಯಾಯರ ಸಾಕ್ಷ್ಯಪತ್ರ, ಚಿತ್ರ ಬಿಡಿಸಲು ಕಲರ್ ಮತ್ತು ಬರೆಯಲು ಪೆನ್ ತರಬೇಕು. ಸ್ಪರ್ಧೆಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ಮಕ್ಕಳಿಗೆ ನಗದು ಬಹುಮಾನ ಹಾಗೂ ಪ್ರಮಾಣ ಪತ್ರ ನೀಡಲಾಗುವುದು. ಡಿಸೆಂಬರ್ 5ರಂದು ಮಧೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಗುವುದು. ಈ ಬಗ್ಗೆ ಮಾಹಿತಿಗೆ ದೂರವಾಣಿ ಸಂಖ್ಯೆ (04994 257450, 9447296990, 9744005792) ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.