ಪೆರ್ಲ: ಪೆರ್ಲದ ಶ್ರೀಶಾರದಾ ಮರಾಟಿ ಸಮಾಜ ಸೇವಾ ಸಂಘ, ಶಾರದಾ ಮರಾಟಿ ಮಹಿಳಾ ವೇದಿಕೆ ,ಶಾರದಾ ಮರಾಟಿ ಚಾರಿಟೇಬಲ್ ಟ್ರಸ್ಟ್ ಸಹಯೋಗದೊಂದಿಗೆ ಉಚಿತ ಮೆಗಾ ವೈದ್ಯಕೀಯ ಶಿಬಿರ ನ. 24ರಂದು ಪೆರ್ಲದ ಬಜಕೂಡ್ಲಿನಲ್ಲಿರುವ ಮರಾಟಿ ಬೋಡಿರ್ಂಗ್ ಹಾಲ್‍ನಲ್ಲಿ ಜರುಗಲಿದೆ.
ರೋಟರಿ ಕ್ಲಬ್ ಕಾಸರಗೋಡು, ಯೇನಪೆÇೀಯ ವಿಸ್ತರಣಾ ನಿರ್ದೇಶನಾಲಯ, ಐಎಂಎ ಕಾಸರಗೋಡು ಸಹಯೋಗದೊಂದಿಗೆ ಶಿಬಿರ ಆಯೋಜಿಸಲಾಗಿದೆ. ಅಂದು ಬೆಳಗ್ಗೆ 9ರಿಂದ ಮಧ್ಯಾಹ್ನ 1 ಗಂಟೆಯ ವರೆಗೆ ಜರಗುವ ಶಿಬಿರದಲ್ಲಿ ಕ್ಯಾನ್ಸರ್ ಸಂಬಂಧಿತ ರೋಗ ತಪಾಸಣೆ, ಹಲ್ಲು,ಕಣ್ಣು,ಪ್ರಸೂತಿ, ಸ್ತ್ರೀರೋಗ, ಮಕ್ಕಳ ತಜ್ಞರು ಭಾಗವಹಿಸಲಿದ್ದಾರೆ. ಬಿಪಿ, ಮಧುಮೇಹ ತಪಾಸಣೆಯೊಂದಿಗೆ ಉಚಿತ ಔಷಧ ಪೂರೈಕೆಯಿರಲಿದೆ ಎಂದು ಪ್ರಕಟಣೆ ತಿಳಿಸಿದೆ.