ಕುಂಬಳೆ: ಕಯ್ಯಾರು ಕ್ರಿಸ್ತರಾಜ ದೇವಾಲಯದ ವಾರ್ಷಿಕ ಹಬ್ಬ ನ.26 ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಅಂದು ಸಂಜೆ 5. 30 ಕ್ಕೆ ಇಗರ್ಜಿ ಮೈದಾನದಲ್ಲಿ ದಿವ್ಯಬಲಿಪೂಜೆ ನಡೆಯಲಿದೆ. ಮಂಗಳೂರು ಧರ್ಮಪ್ರಾಂತ್ಯದ ವಿಕಾರ್ ಜನರಲ್ ವಂದನೀಯ ಮೊನ್ಸಿಂಜೊರ್ ಮ್ಯಾಕ್ಸಿಮ್ ನೊರೊನ್ಹಾ ಮುಖ್ಯ ಅತಿಥಿಯಾಗಿ ಭಾಗವಹಿಸುವರು.
ದಿವ್ಯಬಲಿಪೂಜೆ ಬಳಿಕ ಪರಮ ಪ್ರಸಾದ ಮೆರವಣಿಗೆ ನಡೆಯಲಿದೆ. ಸಂಜೆ 7. 30 ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಕಯ್ಯಾರು ನೂತನ ಇಗರ್ಜಿ ಯೋಜನೆಗೆ ಚಾಲನೆ ನೀಡಲಾಗುವುದು. ಕಾರ್ಯಕ್ರಮದಲ್ಲಿ ಮೊನ್ಸಿಂಜೊರ್ ಮ್ಯಾಕ್ಸಿಮ್ ನೊರೊನ್ಹಾ ಅಧ್ಯಕ್ಷತೆ ವಹಿಸುವರು. ಮಂಗಳೂರು ಮಾಜಿ ಶಾಸಕ ಜೆ. ಆರ್.ಲೋಬೊ, ಉದ್ಯಮಿ ಹಾಗೂ ದಾನಿ ಪೆರ್ಮುದೆಯ ನವೀನ್ ರಂಜಿತ್ ಡಿಸೋಜ ಉಪಸ್ಥಿತರಿರುವರು ಎಂದು ಧರ್ಮಗುರು ಫಾದರ್ ವಿಶಾಲ್ ಮೋನಿಸ್ ತಿಳಿಸಿದ್ದಾರೆ.