ವಾರಾಣಸಿ: ಜ್ಞಾನವಾಪಿ ಮಸೀದಿ ಆವರಣದಲ್ಲಿ ವೈಜ್ಞಾನಿಕ ಸಮೀಕ್ಷೆ ನಡೆಸುತ್ತಿರುವ ಭಾರತೀಯ ಪುರಾತತ್ವ ಇಲಾಖೆಗೆ (ಎಎಸ್‌ಐ) ವರದಿ ಸಲ್ಲಿಸಲು ನೀಡಿದ್ದ ಕಾಲಾವಕಾಶವನ್ನು ಇನ್ನೂ 10 ದಿನಗಳಿಗೆ ವಿಸ್ತರಿಸಿ ವಾರಾಣಸಿ ಜಿಲ್ಲಾ ನ್ಯಾಯಾಲಯವು ಶನಿವಾರ ಆದೇಶ ನೀಡಿದೆ.

ನವೆಂಬರ್ 17ರಂದು ವರದಿ ಸಲ್ಲಿಸಲು ಎಎಸ್‌ಐಗೆ ಈ ಮೊದಲು ನ್ಯಾಯಾಲಯ ಸೂಚಿಸಿತ್ತು.
ತಾಂತ್ರಿಕ ವರದಿಯು ಲಭ್ಯವಾಗದ ಕಾರಣ ಸಮೀಕ್ಷೆಯ ವರದಿ ಸಲ್ಲಿಸಲು ಎಎಸ್‌ಐಗೆ ಮತ್ತಷ್ಟು ಸಮಯ ತಗಲುತ್ತದೆ ಎಂದು ಹಿಂದೂ ಅರ್ಜಿದಾರರ ಪರ ವಕೀಲ ಮದನ್ ಮೋಹನ್ ಯಾದವ್ ಅವರು ಹೇಳಿದ್ದಾರೆ.