ಕಾಸರಗೋಡು: ಅನಧಿಕೃತವಗಿ ನಗರದಲ್ಲಿ ವ್ಯಾಪಾರ ನಡೆಸುತ್ತಿರುವ ಬೀದಿ ಬದಿ ವ್ಯಾಪಾರಿಗಳಿಂದ ಉಂಟಾಗುತ್ತಿರುವ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತರುವ ನಿಟ್ಟಿನಲ್ಲಿ ಮರ್ಚಂಟ್ ಅಸೋಸಿಯೇಶನ್ ವತಿಯಿಂದ ನ. 28ರಂದು ಬೆಳಗ್ಗೆ 10ರಿಂದ 12ರ ವರೆಗೆ ಕಾಸರಗೋಡು ನಗರದಲ್ಲಿ ವ್ಯಾಫಾರಿಗಳಿಂದ 'ಪ್ರತಿಭಟನಾ ವ್ಯಾಪಾರ'ನಡೆಯಲಿರುವುದಾಗಿ ಸಂಘಟನೆ ಕಸರಗೋಡು ನಗರ ಘಟಕ ಅಧ್ಯಕ್ಷ ಟಿ.ಪಿ ಇಲ್ಯಾಸ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ವ್ಯಾಪಾರಿಗಳಿಗೆ ಸುಗಮ ವ್ಯಾಪಾರಕ್ಕಾಗಿ,ರಸ್ತೆ ಪ್ರಯಾಣಿಕರ ಸುಗಮ ಸಂಚಾರಕ್ಕಾಗಿ,ನಗರ ಸೌಂದರ್ಯೀಕರಣಕ್ಕಾಗಿ..ಎಂಬ ಘೋಷಣೆಯೊಂದಿಗೆ ಕಾಸರಗೋಡುವ್ಯಾಪಾರಿಗಳ ಸಂಘನವೆಂಬರ್ 28ರಂದು ಸೂಚನಾ ಮುಷ್ಕರ ನಡೆಸಲಾಗುತ್ತಿದೆ.
ಕಾಸರಗೋಡು ನಗರದಲ್ಲಿ ಬೀದಿ ವ್ಯಾಪಾರಿಗಳಿಂದ ಪಾದಚಾರಿಗಳಿಗೆ, ಗ್ರಾಹಕರಿಗೆ ಹೆಚ್ಚಿನ ಸಮಸ್ಯೆ ಉಂಟಾಗುತ್ತಿದೆ. ಕಾಸರಗೋಡು ಸರ್ಕಾರಿ ಹೈಯರ್ ಸೆಕೆಂಡರಿಸ್ಕೂಲ್ ಜಂಕ್ಷನ್‍ನಿಂದ ಬದರಿಯಾ ಹೋಟೆಲ್‍ವರೆಗಿನ ಪಾದಚಾರಿಗಳ ಕಾಲ್ನಡೆ ಹಾದಿಯನ್ನು ಸಂಪೂರ್ಣ ಬೀದಿಬದಿ ವ್ಯಾಪಾರಿಗಳು ಅತಿಕ್ರಮಿಸಿಕೊಳ್ಳುತ್ತಿದ್ದಾರೆ. ಕಾನೂನು ಪ್ರಕಾರ ಪವರಾನಗಿ ಪಡೆದು, ನಿಗದಿತ ತೆರಿಗೆ ಪಾವತಿಸಿ ವ್ಯಾಪಾರ ನಡೆಸುತ್ತಿರುವ ವ್ಯಾಪಾರಿಗಳಿಗೆ ಇಂತಹ ಬೀದಿ ಬದಿ ವ್ಯಾಪಾರಿಗಳಿಂದ ಸಮಸ್ಯೆ ಉಂಟಾಗುತ್ತಿದೆ. ಬೀದಿ ಬದಿ ವ್ಯಾಪಾರಿಗಳನ್ನು ನಗರದಿಂದ ತೆರವುಗೊಳಿಸಿ, ಅವರಿಗೆ ವ್ಯಾಪಾರಕ್ಕಾಗಿ ಪ್ರತ್ಯೇಕ ಸ್ಥಳ ಕಂಡುಕೊಳ್ಳುವಂತೆ ಅವರು ಸಂಬಂಧಪಟ್ಟವರನ್ನು ಆಗ್ರಹಿಸಿದರು. ರಸ್ತೆ ಮತ್ತು ಪಾರ್ಕಿಂಗ್ ಏರಿಯಾಗಳನ್ನು ಅತಿಕ್ರಮಿಸಿ ಇಲ್ಲಿ ವ್ಯಾಪಾರ ನಡೆಸುತ್ತಿದ್ದರೂ, ನಗರಸಭೆ, ಪೊಲೀಸ್ ಅಥವಾ ಪಿಡಬ್ಲ್ಯೂಡಿ ಮೌನ ಪಾಲಿಸುತ್ತಿದೆ. ಅನಧಿಕೃತ ಬೀದಿಬದಿ ವ್ಯಾಪಾರಿಗಳ ವಿರುದ್ಧ ಯಾರು ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆಯೂ ಅಧಿಕಾರಿಗಳಲ್ಲೇ ಸ್ಪಷ್ಟ ಧೋರಣೆಯಿಲ್ಲದಿರುವುದು ಸಮಸ್ಯೆಗೆ ಕಾರಣವಾಗಿದೆ ಎಂದು ದೂರಿದರು.
ಸುದ್ದಿಗೋಷ್ಠಿಯಲ್ಲಿ ವ್ಯಾಪಾರಿಸಂಘ ಕಾಸರಗೋಡು ಘಟಕ ಕಾರ್ಯದರ್ಶಿ ಕೆ.ದಿನೇಶ್, ಕೋಶಾಧಿಕಾರಿ ನಹೀಂ ಅಂಕೋಲಾ, ಮನೀರ್ ಎಂ.ಎಂ.ಹ್ಯಾರಿಸ್ ಸಿ.ಕೆ, ಅಜಿತ್ ಕುಮಾರ್, ಶರಶರ್ಫುದ್ದೀನ್ ಉಪಸ್ಥಿತರಿದ್ದರು.