ಮುಂಬೈ: ಬಾಲಿವುಡ್ ನಟ ಶಾರುಖ್ ಖಾನ್ ನ.2ರಂದು 58ನೇ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದರು. ಆದರೆ, ಶಾರುಖ್ ನಿವಾಸದ (ಬಾಂದ್ರಾದ ಮನ್ನತ್) ಎದುರು ನೆರೆದಿದ್ದ 30ಕ್ಕೂ ಹೆಚ್ಚು ಅಭಿಮಾನಿಗಳ ಮೊಬೈಲ್ ಕಳವು ಮಾಡುವ ಮೂಲಕ ಕಳ್ಳರು ಕೈಚಳಕ ತೋರಿಸಿದ್ದರು.

ಮೊಬೈಲ್ ಕಳೆದುಕೊಂಡವರು ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಕುರಿತು ತನಿಖೆ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ಶುಭಂ ಜಮ್ನಾಪ್ರಸಾದ್, ಮೊಹಮ್ಮದ್ ಅಲಿ ಮತ್ತು ಇಮ್ರಾನ್ ಎಂದು ಗುರುತಿಸಲಾಗಿದೆ. ಆರೋಪಿಗಳ ಬಳಿ ಒಂಬತ್ತು ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ವಿವಿಧ ರಾಜ್ಯಗಳಿಂದ ಮುಂಬೈಗೆ ಆಗಮಿಸಿದ್ದ ಅಭಿಮಾನಿಗಳು ನೆಚ್ಚಿನ ನಟನಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದರು. ಅನೇಕರು ಉಡುಗೊರೆ, ಕೇಕ್, ಪೋಸ್ಟರ್, ಸಿಹಿತಿಂಡಿ, ಹೂಗುಚ್ಛಗಳನ್ನು ನೀಡಿ ಸಂತಸ ವ್ಯಕ್ತಪಡಿಸಿದ್ದರು.
ಶಾರುಕ್ ಹುಟ್ಟುಹಬ್ಬದ ಹಿನ್ನೆಲೆ ಜವಾನ್ ಚಿತ್ರವನ್ನು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಸದ್ಯ ಶಾರುಕ್ 'ಡಂಕಿ', 'ಟೈಗರ್ 3', 'ದಿ ಆರ್ಚೀಸ್' ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.