HEALTH TIPS

300 ವರ್ಷಗಳ ಹಿಂದೆ ಶ್ರೀ ಶಂಕರಾಚಾರ್ಯರು ಕಾಲಡಿಯಿಂದ ಶ್ರೀನಗರಕ್ಕೆ ತೆರಳಿದ್ದರು: ಎಡೆಬಿಡದೆ ಮುಂದುವರಿದ ಕಾಸರಗೋಡು ಸಂಸದರ ವಿವಾದಾತ್ಮಕ ಹೇಳಿಕೆಗಳು

                ತಿರುವನಂತಪುರ: ಹನ್ನೆರಡು ಶತಮಾನಗಳ ಹಿಂದೆ (ಕ್ರಿ.ಶ. 788 - 820) ಬದುಕಿದ್ದ ಜಗದ್ಗುರು ಶ್ರೀ ಶಂಕರಾಚಾರ್ಯರು ಮುನ್ನೂರು ವರ್ಷಗಳ ಹಿಂದೆ ಶ್ರೀನಗರಕ್ಕೆ ಬಂದು ದೇವಾಲಯವನ್ನು ಸ್ಥಾಪಿಸಿದರು ಎಂದು ಕಾಸರಗೋಡು ಸಂಸದ ರಾಜಮೋಹನ್ ಉಣ್ಣಿತ್ತಾನ್ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿ ಚರ್ಚೆಗೆ ಗ್ರಾಸವಾಗಿದ್ದಾರೆ. 

                ಉಣ್ಣಿತ್ತಾನ್ ಅವರು ತಮ್ಮ ಫೇಸ್ ಬುಕ್ ಪ್ರೊಪೈಲ್ ಮೂಲಕ ಪೋಸ್ಟ್ ಮಾಡಿದ ಫೆÇೀಟೋಗೆ ಶೀರ್ಷಿಕೆಯಾಗಿ ಆಚಾರ್ಯ ಸ್ವಾಮಿ ಅವರ ಜೀವನದ ಬಗ್ಗೆ ಸುಳ್ಳು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

               "300 ವರ್ಷಗಳ ಹಿಂದೆ ಶ್ರೀ ಶಂಕರಾಚಾರ್ಯರು ಕಾಲಡಿಯಿಂದ ಶ್ರೀನಗರಕ್ಕೆ ತೆರಳಿ ಬೆಟ್ಟದ ಮೇಲೆ ತಪಸ್ಸು ಮಾಡಿದರು ಮತ್ತು ಅಲ್ಲಿ ಸ್ಥಾಪಿಸಲಾದ ಶಿವ ದೇವಾಲಯಕ್ಕೆ ಭೇಟಿ ನೀಡಿದರು. 120 ಮೆಟ್ಟಿಲುಗಳನ್ನು ಏರುವ ಮೂಲಕ ಇಲ್ಲಿಗೆ ತಲುಪಬಹುದು..." ಎಂದು ಉಣ್ಣಿತ್ತಾನ್ ಹೇಳಿಕೊಂಡಿದ್ದಾರೆ.


              ಈ ಪೋಸ್ಟ್ ನ ಕೆಳಗೆ, ಅನೇಕ ಜನರು ತಪ್ಪನ್ನು ಎತ್ತಿ ತೋರಿಸಿದ್ದಾರೆ. ಜಗದ್ಗುರು ಆದಿ ಶಂಕರಾಚಾರ್ಯರು ಕ್ರಿ.ಶ.788-809 ಅಥವಾ 820ರಲ್ಲಿ ಜೀವಿಸಿದ್ದರು ಎಂದು ನಂಬಲಾಗಿದೆ. ಆದರೆ ಕೆಲವು ಸಂಪ್ರದಾಯಗಳ ಪ್ರಕಾರ ಅವರ ಜೀವಿತಾವಧಿ ಕ್ರಿ.ಪೂ. 509-477 ಎಂದೂ ಇದೆ. ಸ್ವಾಮಿ ತಪಸ್ಯಾನಂದರ ಶಂಕರದಿಗ್ ಸಮ್ಯಕ (2002) ಕ್ರಿ.ಪೂ. 509-477ರ ಅವಧಿ ಎಂದು ಉಲ್ಲೇಖಿಸಿದೆ. ಆದರೆ ಇಲ್ಲಿ ಮುನ್ನೂರು ವರ್ಷಗಳ ಹಿಂದೆ ಎಂದು ಹೇಳುವುದಾದರೆ ಅದು ಕ್ರಿ.ಶ.1700 ಆಗಿರುತ್ತದೆ. ಇದು ತಪ್ಪು ಎಂದು ಅನೇಕರು ಈ ಪೋಸ್ಟ್‍ನಲ್ಲಿ ಸೂಚಿಸಿದ್ದಾರೆ.

           ರಾಜ್ ಮೋಹನ್ ಉಣ್ಣಿತ್ತಾನ್ ಅವರು ಕಾಸರಗೋಡು ಸಂಸದರಾಗಿ ಆಯ್ಕೆಯಾದಾಗಿನಿಂದ ಹಲವಾರು ವಿವಾದಗಳಲ್ಲಿ ಭಾಗಿಯಾಗಿದ್ದಾರೆ. ಉಣ್ಣಿತ್ತಾನ್ ಅವರು ಯಾವಾಗಲೂ ತಲಸ್ಪರ್ಶಿ ಹೇಳಿಕೆಗಳ ಮೂಲಕ ಹಿಂದೆ ಗುರುತಿಸಿಕೊಂಡವರು. ಆದರೆ ಕಾಸರಗೋಡು ಸಂಸದರಾದ ಬಳಿಕ ಅವರು ತಮ್ಮ ವಿವಾದಾತೀತ ವ್ಯಕ್ತಿತ್ವದ ಗುರುತನ್ನು ಅಳಿಸಿ ಹಾಕಿದರು. ಅಂದಿನಿಂದ ಉಣ್ಣಿತ್ತಾನ್ ಅವರು ಧಾರ್ಮಿಕ ತುಷ್ಟೀಕರಣ ಕಾರ್ಯಸೂಚಿ ಬಿಡುಗಡೆ ಮಾಡುತ್ತಿರುವುದು ಅಚ್ಚರಿಮೂಡಿಸಿದೆ. 

               ಕೆಲ ದಿನಗಳ ಹಿಂದೆ ಗುರುವಾಯೂರಿಗೆ ಭೇಟಿ ನೀಡಿದಾಗ ಸುತ್ತುಗೋಡೆಯಿಂದ ಹೊರಗೆ ಮುಖ ತಿರುಗಿಸಿ ಪೋಟೋ ತೆಗೆದು ಫೇಸ್ ಬುಕ್ ನಲ್ಲಿ ಹಾಕಿದ್ದರು.

                ಈಗ ಶಂಕರಾಚಾರ್ಯರ ಬಗ್ಗೆ ಹಲವರು ತಪ್ಪು ಮಾಹಿತಿ ಪ್ರಸರಿಸುತ್ತಿದ್ದು, ತಿದ್ದಲು ಮುಂದಾಗುತ್ತಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಭಟನೆ ನಡೆಯುತ್ತಿದೆ.

                ಏತನ್ಮಧ್ಯೆ, ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂತೆಗೆದುಕೊಂಡ  ಕೇಂದ್ರ ಸರ್ಕಾರದ ನಿರ್ಧಾರದ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಸ್ಥಿತಿ ಸಂಪೂರ್ಣವಾಗಿ ಶಾಂತವಾಗಿದೆ. ಶ್ರೀನಗರಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿದೆ. ಈ ಸಂದರ್ಭದ ಲಾಭ ಪಡೆದು ಹಲವು ಕಾಂಗ್ರೆಸ್ ನಾಯಕರು ಕುಟುಂಬ ಸಮೇತ ಕಾಶ್ಮೀರಕ್ಕೆ ವಿಹಾರಕ್ಕೆ ಬರುತ್ತಿರುವುದು ಸಂಸದರ ಅರಿವಿಗೆ ಬಂದಿಲ್ಲವೇ ಎಂದು ಟಿಪ್ಪಣಿಯೊಂದು ಗಮನ ಸೆಳೆದಿದೆ. 

https://m.facebook.com/story.php?story_fbid=894274622061192&id=100044359872797&mibextid=6aamW6

https://m.facebook.com/rajmohanunnithaan?eav=AfbsmkNa49Kg1As3ic4fWoKQ8ddDJPpLbyf8PgqD2tEaR1dcHDYGs7uLhcuw5Gz8Ftg&fref=nf&pn_ref=story&refid=52&_ft_=encrypted_tracking_data.0AY-kTzpu_Nl9GAk_MPqyXnA-ySMfGGEmrJmw7B5K1ZUn6A5gUQHy-5fSS2dNdV0CAAJ8Zoau5zqBLtfAoGFtI0tyFqXIl9JCBwluDIbUe4RvMfE9zQjaLR54j2A-hBaTCGpWJS4f87xZ_KDD0doqfAZf24ItfDQP9FCN72yQHMlmw_nPU63eBQjugOJGbYhQ52aCLa_23MafzAv8lScQF6p-ByPPclBZiwaXHmze5Y1LCvZtbGI5sSoTcWQVlh6QvpzbOi2EON2UF6xfx29yDaXmEMzqEO8LSSSAeYdTeNiCZo-KbnS0w8y5eRBZhdKDDkt5d_YiQiXMPincr9enOdQsox8ZSAyavGEYIhz66TzqSv8zyRHZSsnJD4WC1mnbLu9JA3zPLKOLtrj3TpMsZgfZtkHAn0Xin9Gk8UX_Doir_ZpnFvxHhjxZazRaRKaY4H8HM6GlC0fvDv3tticNdsN_dMWA9QeefalEdKq21Ilx72SrzUCDyAWh0rbH3KlMyCYR0y04AxtJCy9dnLL90QJwni0OUjDJ1jlKkU6Epf9Lm6BOofH1DrUS-iOfVJpFaFlPScwvyvh6WNaIHfewTaP3xq-xXsAjR8jYn6iyB52aNiBKykFAZNCDqPqOM5E3_sBZ7wENKtnmSj1n1xs1UIBbqt5Yctpjm1Ra08lXl5bFFOMdoBaH4pSCNzdfbJF71xC_bAmgDuKSPwdA52JtzDvRn94tPEuWW5M5AetrhYkCM9Ol_TbX4m-SOTRUFCBKJf5qF5O06FLRu-oa34GrGQZyOyAJb0CGLytY5aCqivgvD6Th_dedDLZYEq-BK3V1C_xfjYdPDHPG0tsO0waE4FqH5N4li3xJ64mBnEJu7BdP7Xo-JO3bM1A1svS5AmUHCWgL0qodG8HHnss7YYipTzmTV07ZkSAvMp8FIgMRogJpBe_9cbal1UCs2dJLXR8xlfg38yg5ZnbWnsnAkBFV4E1NH4aDdKLQJ9G__u4rRT5hUrW482xOOWZuYvSn4G0KQkEsKHTtOk0ubdLf9rn6Pu5vtUFXrmSuvSI8iChoOIE4ok1gS3kjY8TNePHF2EFTNFm3_m-AOLo6tPjjO6llw6bcOdr59vNdmWPK3Vx5DQBaqH3N-HHnlDGY_M0T2d2iWu1R-L5PRI1ZBcvFqPbXty2xcr_YOPJ3kFxLERnHtzFkp-B9xQzy_17l0nIYZxcxesyZvX-NnqR1BDgCptSr28AWd5sgX9R2LJW-IbOxUeScidjmidbvOFH5L6pGYWqZxJPVcnGu3GxRehEYL4qJ4dPm81bW0LIE2wBGPrV67pPF_x6mllYgO4veuivTJvOaBUwZl8a0jWXOblD_HdpIhK5P2gJ0VowWMeO2ZQepME_ALx4zq8BDwbyjBUzhgy15kWSFuuR04_uMXYtpZCTtOycbFuDVdBAWr7Lz2i4wKll5JyqJKdJfA3wL8o2UtX_bTDQkPDS8fz9NeqQYdJGf&__tn__=%7E%7E-R&paipv=0

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries