ತಿರುವನಂತಪುರ: ಸಚಿವೆ ಆರ್.ಬಿಂದು ಅವರಿಗೆ ಕನ್ನಡಕ ಖರೀದಿಗೆ ಸಾರ್ವಜನಿಕ ಆಡಳಿತ ಇಲಾಖೆ 30,500 ರೂ. ಮಂಜೂರು ಮಾಡಿದೆ. ಸರ್ಕಾರ ಆರ್ಥಿಕ ಮುಗ್ಗಟ್ಟಿನಲ್ಲಿರುವಾಗ ಕನ್ನಡಕಕ್ಕೆ ಇμÉ್ಟೂಂದು ಮೊತ್ತ ಮೀಸಲಿಟ್ಟಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.
ವೈದ್ಯರ ಸಲಹೆ ಮೇರೆಗೆ ಸಚಿವರು ಕನ್ನಡಕ ಖರೀದಿಸಿದ್ದು, ಪಾವತಿಗಾಗಿ ಹಣ ಮಂಜೂರಾಗಿದೆ ಎಂಬುದು ಅಧಿಕೃತ ವಿವರಣೆ.
ವಿರೋಧ ಪಕ್ಷದ ಶಾಸಕರು ಸಚಿವರ ಕನ್ನಡಕ ಖರೀದಿ ಬಗ್ಗೆ ಚರ್ಚೆ ಹುಟ್ಟುಹಾಕಿವೆ. ಆದರೆ ಇದು ದುರುದ್ದೇಶಪೂರಿತ ಎಂದು ಸರ್ಕಾರದ ಮೂಲಗಳು ಅಭಿಪ್ರಾಯಪಟ್ಟಿವೆ. ಈ ಬಗ್ಗೆ ಪ್ರತಿಕ್ರಿಯಿಸಲು ಸಚಿವೆ ಬಿಂದು ಸಿದ್ಧರಾಗಿಲ್ಲ. ಸ್ಪೀಕರ್ ಪಿ. ಶ್ರೀರಾಮಕೃಷ್ಣನ್ ಕನ್ನಡಕಕ್ಕೆ 49,900 ರೂಪಾಯಿ ಖರ್ಚು ಮಾಡಿದ್ದು ವಿವಾದಕ್ಕೀಡಾಗಿತ್ತು.