ಸೋಲ್: ದಕ್ಷಿಣ ಕೊರಿಯಾ ತನ್ನ ಮೊದಲ ಸ್ವದೇಶಿ ನಿರ್ಮಿತ ಬೇಹುಗಾರಿಕಾ ಉಪಗ್ರಹವನ್ನು ಈ ತಿಂಗಳ ಅಂತ್ಯದಲ್ಲಿ ಉಡಾವಣೆ ಮಾಡಲು ಯೋಜಿಸಿದೆ.
ಸೋಲ್: ದಕ್ಷಿಣ ಕೊರಿಯಾ ತನ್ನ ಮೊದಲ ಸ್ವದೇಶಿ ನಿರ್ಮಿತ ಬೇಹುಗಾರಿಕಾ ಉಪಗ್ರಹವನ್ನು ಈ ತಿಂಗಳ ಅಂತ್ಯದಲ್ಲಿ ಉಡಾವಣೆ ಮಾಡಲು ಯೋಜಿಸಿದೆ.
ತನ್ನ ಪ್ರತಿಸ್ಪರ್ಧಿ ಉತ್ತರ ಕೊರಿಯಾವು ಅಣ್ವಸ್ತ್ರ ಶಸ್ತ್ರಾಗಾರವನ್ನು ವಿಸ್ತರಿಸಲು ಮುಂದಾಗಿರುವ ಸಂದರ್ಭದಲ್ಲಿ, ಅದರ ಮೇಲೆ ನಿಗಾವಹಿಸಲು ಇದು ಸಹಕಾರಿಯಾಗಲಿದೆ ಎಂದು ದಕ್ಷಿಣ ಕೊರಿಯಾ ಹೇಳಿದೆ.
'ದೇಶದ ಮೊದಲ ಸೇನಾ ಬೇಹುಗಾರಿಕಾ ಉಪಗ್ರಹವನ್ನು ಕ್ಯಾಲಿಫೋರ್ನಿಯಾದ ವಾಂಡೆನ್‌ಬರ್ಗ್ ವಾಯುನೆಲೆಯಿಂದ ಇದೇ 30ರಂದು ಉಡಾವಣೆ ಮಾಡಲಾಗುವುದು' ಎಂದು ದಕ್ಷಿಣ ಕೊರಿಯಾದ ರಕ್ಷಣಾ ಸಚಿವಾಲಯದ ವಕ್ತಾರ ಜಿಯೋನ್ ಹಾ ಗ್ಯು ಸೋಮವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.
'ಸ್ಪೇಸ್‌ಎಕ್ಸ್‌ನ ಫಾಲ್ಕನ್ 9 ರಾಕೆಟ್ ಈ ಉಪಗ್ರಹವನ್ನು ಹೊತ್ತೊಯ್ಯಲಿದೆ. ಸ್ಪೇಸ್‌ಎಕ್ಸ್ ಜತೆಗೆ ಮಾಡಿಕೊಂಡಿರುವ ಒಪ್ಪಂದದಡಿ 2025ರವೇಳೆಗೆ ಇನ್ನೂ ನಾಲ್ಕು ಬೇಹುಗಾರಿಕಾ ಉಪಗ್ರಹಗಳನ್ನು ಉಡಾವಣೆ ಮಾಡಲು ಯೋಜಿಸಲಾಗಿದೆ' ಎಂದು ಅವರು ಹೇಳಿದ್ದಾರೆ.
ದಕ್ಷಿಣ ಕೊರಿಯ ಪ್ರಸ್ತುತ ತನ್ನದೇ ಆದ ಸೇನಾ ಬೇಹುಗಾರಿಕಾ ಉಪಗ್ರಹಗಳನ್ನು ಹೊಂದಿಲ್ಲ. ಉತ್ತರ ಕೊರಿಯಾದ ಚಲನೆಯ ಮೇಲೆ ನಿಗಾವಹಿಸಲು ಅದು ಅಮೆರಿಕದ ಬೇಹುಗಾರಿಕಾ ಉಪಗ್ರಹಗಳನ್ನು ಅವಲಂಬಿಸಿದೆ.