ಕಾಸರಗೋಡು: ಜಿಲ್ಲೆಯಲ್ಲಿ ಕೇರಳ ಸಮುದ್ರ ಮೀನುಗಾರಿಕೆ ನಿಯಂತ್ರಣ ಕಾಯ್ದೆಯನ್ನು ಜಾರಿಗೊಳಿಸಲು ಮೀನುಗಾರಿಕೆ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಅನಧಿಕೃತ ಮೀನುಗಾರಿಕೆ ತಡೆಗಟ್ಟಲು ನಿಯಮಿತ ಸಮುದ್ರ ಪೆಟ್ರೋಲಿಂಗ್ ಮತ್ತು ದಂಡ ವಸೂಲಿ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಆಗಸ್ಟ್‍ನಿಂದ ಅಕ್ಟೋಬರ್ ತಿಂಗಳ ವರೆಗೆ ಅಕ್ರಮ ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದ ಇತರ ರಾಜ್ಯಗಳ ದೋಣಿಗಳು ಸೇರಿದಂತೆ ವಿವಿಧ ಮೀನುಗಾರಿಕಾ ಹಡಗುಗಳ ಮಾಲೀಕರಿಂದ ಇಲಾಖೆಯು 39 ಲಕ್ಷ ರೂಪಾಯಿ ದಂಡ ವಸೂಲಿ ಮಾಡಿದೆ. ಫಿಶರೀಸ್, ಮರೈನ್ ಎನ್ಫೋಸ್ಮೆರ್ಂಟ್ ಮತ್ತು ಕೋಸ್ಟಲ್ ಪೆÇೀಲೀಸ್ ಜಂಟಿಯಾಗಿ ಜಿಲ್ಲೆಯಲ್ಲಿ ಸಮುದ್ರ ಪೆಟ್ರೋಲಿಂಗ್ ನಡೆಸಿದ್ದು, ಈ ಆರ್ಥಿಕ ವರ್ಷದಲ್ಲಿ ರಾಜ್ಯದಲ್ಲಿ ಕಾನೂನು ಉಲ್ಲಂಘಿಸಿದ ಮೀನುಗಾರಿಕಾ ದೋಣಿಗಳಿಗೆ ಅತಿ ಹೆಚ್ಚು ದಂಡ ವಿಧಿಸಲಾಗಿದ್ದು ಕಾಸರಗೋಡು ಜಿಲ್ಲೆಯಲ್ಲಾಗಿದೆ. ಮುಂಬರುವ ದಿನಗಳಲ್ಲಿ ಅಕ್ರಮ ಮೀನುಗಾರಿಕೆ ನಡೆಸುವ ಹಡಗುಗಳ ವಿರುದ್ಧ ಕಾರ್ಯಾಚರನೆ ಮುಮದುವರಿಯಲಿದ್ದು, ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕಾಸರಗೋಡು ಫಿಶರೀಸ್ ಡಿಪ್ಯೂಟಿ ಡೈರೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.