ಕೊಲ್ಲಂ: ಮಾತಾ ಅಮೃತಾನಂದಮಯಿ ದೇವಿ ಅವರು ಇದೇ ತಿಂಗಳ 24ರಿಂದ 26ರವರೆಗೆ ಬ್ಯಾಂಕಾಕ್‍ನಲ್ಲಿ ನಡೆಯಲಿರುವ 3ನೇ ವಿಶ್ವ ಹಿಂದೂ ಕಾಂಗ್ರೆಸ್‍ನಲ್ಲಿ ಭಾಷಣ ಮಾಡಲಿದ್ದಾರೆ.
ವಲ್ರ್ಡ್ ಹಿಂದೂ ಫೌಂಡೇಶನ್ ಇಂಪ್ಯಾಕ್ಟ್ ಕನ್ವೆನ್ಷನ್ ಸೆಂಟರ್‍ನಲ್ಲಿ ಆಯೋಜಿಸಿರುವ ಸಮ್ಮೇಳನದಲ್ಲಿ ವಿವಿಧ ದೇಶಗಳ ತಜ್ಞರು ಮತ್ತು ವಿದ್ವಾಂಸರು ಮಾತನಾಡಲಿದ್ದಾರೆ.
60ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಪಾಲ್ಗೊಳ್ಳಲಿರುವ ಈ ಸಮಾವೇಶದಲ್ಲಿ ಹಿಂದೂ ಸಮುದಾಯ ಎದುರಿಸುತ್ತಿರುವ ಸವಾಲುಗಳು ಮತ್ತು ಅವಕಾಶಗಳ ಕುರಿತು ಚರ್ಚಿಸಲು ವಿಶಾಲ ವೇದಿಕೆ ಕಲ್ಪಿಸುವ ಗುರಿ ಹೊಂದಲಾಗಿದೆ.
ಆರ್ಥಿಕತೆ, ಶಿಕ್ಷಣ, ಮಾಧ್ಯಮ, ರಾಜಕೀಯ, ಸಂಘಟನೆಗಳು ಮತ್ತು ನಾಯಕತ್ವ ಕ್ಷೇತ್ರದಲ್ಲಿ ಹಿಂದೂ ಮಹಿಳೆಯರು ಮತ್ತು ಯುವಕರ ಕೊಡುಗೆಯಂತಹ ಪ್ರಮುಖ ವಿಷಯಗಳ ಕುರಿತು ಸಮ್ಮೇಳನದಲ್ಲಿ ಚರ್ಚಿಸಲಾಗುವುದು. ಈ ಬಾರಿಯ 3ನೇ ವಿಶ್ವ ಹಿಂದೂ ಕಾಂಗ್ರೆಸ್ 'ಜಯಸ್ಯ ಆಯತನಂ ಧರ್ಮ' ಎಂಬ ವಿಷಯದಲ್ಲಿ ಅಂದರೆ ಧರ್ಮವು ಯಶಸ್ಸಿನ ಕೇಂದ್ರವಾಗಿದೆ ತತ್ವದಡಿ ಕಾರ್ಯಕ್ರಮ ಆಯೋಜಿಸಿದೆ.. ವಿಶ್ವ ಹಿಂದೂ ಕಾಂಗ್ರೆಸ್ ಅನ್ನು ಈ ಹಿಂದೆ 2014 ರಲ್ಲಿ ದೆಹಲಿ ಮತ್ತು 2018 ರಲ್ಲಿ ಚಿಕಾಗೋದಲ್ಲಿ ಆಯೋಜಿಸಲಾಗಿತ್ತು.