ಪೆರ್ಲ: 2023ನೇ ಸಾಲಿನ ಐಎನ್‍ಐ-ಸಿಇಟಿ ಅಖಿಲ ಭಾರತ ಎಐಐಎಂಎಸ್ ಪರೀಕ್ಷೆಯಲ್ಲಿ ಅನೀಶ್ ಜಿ. ಅವರು 41ನೇ ರ್ಯಾಂಕ್ ಗಳಿಸಿ ಎಂಡಿ ಪದವಿಗೆ ಅರ್ಹತೆ ಪಡೆದಿದ್ದಾರೆ. ಎಂಬಿಬಿಎಸ್ ಪರೀಕ್ಷೆಯಲ್ಲೂ ಇವರು ಏಳನೇ ರ್ಯಾಂಕ್ ಗಳಿಸಿದ್ದರು. ಇವರು ನಿವೃತ್ತ ಮುಖ್ಯ ಶಿಕ್ಷಕ ಕೆ.ಜಿ ಸುಬ್ರಹ್ಮಣ್ಯ ಭಟ್-ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲಾ ಶಿಕ್ಷಕಿ ಗೀತಾಲಕ್ಷ್ಮೀ ಎಸ್ ದಂಪತಿ ಪುತ್ರ.