ನವದೆಹಲಿ: ಭಾರತೀಯ ಪೇಟೆಂಟ್ ಕಚೇರಿ ಈ ಆರ್ಥಿಕ ವರ್ಷದಲ್ಲಿ ನವೆಂಬರ್ 15ರ ವರೆಗೆ ಬರೋಬ್ಬರಿ 41,010 ಪೇಟೆಂಟ್‌ಗಳನ್ನು ನೀಡಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.
ನವದೆಹಲಿ: ಭಾರತೀಯ ಪೇಟೆಂಟ್ ಕಚೇರಿ ಈ ಆರ್ಥಿಕ ವರ್ಷದಲ್ಲಿ ನವೆಂಬರ್ 15ರ ವರೆಗೆ ಬರೋಬ್ಬರಿ 41,010 ಪೇಟೆಂಟ್‌ಗಳನ್ನು ನೀಡಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಗೋಯಲ್, 'ಇದು ದಾಖಲೆ.
2013-14ರ ಆರ್ಥಿಕ ವರ್ಷದಲ್ಲಿ 4,227 ಪೇಟೆಂಟ್‌ಗಳನ್ನು ನೀಡಲಾಗಿತ್ತು ಎಂದೂ ಉಲ್ಲೇಖಿಸಿದ್ದಾರೆ.
'ಇದೊಂದು ಗಮನಾರ್ಹ ಸಾಧನೆ' ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.
ವಿಶ್ವ ಬೌದ್ಧಿಕ ಆಸ್ತಿ ಸಂಸ್ಥೆಯ ವರದಿ ಪ್ರಕಾರ, ಪೇಟೆಂಟ್‌ಗಾಗಿ ಭಾರತೀಯರು ಸಲ್ಲಿಸುವ ಅರ್ಜಿಗಳ ಪ್ರಮಾಣ 2022ರಲ್ಲಿ ಶೇ 31.6ರಷ್ಟು ಏರಿಕೆಯಾಗಿದೆ. ಇದು ಕಳೆದ 11 ವರ್ಷಗಳಲ್ಲಿ ಪೇಟೆಂಟ್‌ಗಾಗಿ ಅರ್ಜಿ ಸಲ್ಲಿಸುವ ಅಗ್ರ ಹತ್ತು ರಾಷ್ಟ್ರಗಳಿಗಿಂತ ಸಾಟಿಯಿಲ್ಲದ ಪ್ರಮಾಣದಲ್ಲಿ ಏರಿಕೆಯಾಗಿದೆ.