ಬದಿಯಡ್ಕ: ಮಾವಿನಕಟ್ಟೆ ಪರಿವಾರ ಸಮೇತ ಶ್ರೀ ಅಯ್ಯಪ್ಪ ಸ್ವಾಮೀ ಭಜನಾ ಮಂದಿರದ 42ನೇ ವಾರ್ಷಿಕೋತ್ಸವ ಹಾಗೂ ಸಾಂಸ್ಕøತಿಕ ಭವನದ ಉದ್ಘಾಟನೆ ಸೋಮವಾರ ಆರಂಭಗೊಂಡಿದ್ದು ಇಂದು(21) ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಳ್ಳಲಿದೆ.
ಸೋಮವಾರ ಬೆಳಗ್ಗೆ ದೀಪೆÇೀಜ್ವಲನ, ಮಹಾಗಣಪತಿ ಹವನ, ಮುದ್ರಾಧಾರಣೆ, ಭಜನೆ, ಬಳಿಕ ಸಿಂಗಾರಿ ಮೇಳ ಪ್ರದರ್ಶನ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನದಾನ ನಡೆಯಿತು.
ಅಪರಾಹ್ನ ಭಜನೆ, ಕುಣಿತ ಭಜನೆ, ಸಂಜೆ ನೂತನವಾಗಿ ನಿರ್ಮಿಸಿದ ಸಾಂಸ್ಕøತಿಕ ಭವನದ ಉದ್ಘಾಟನೆಯನ್ನು ಎಡನೀರು ಮಠಾೀಶ ಶ್ರೀಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ನಿರ್ವಹಿಸಿದರು. ಮುಖ್ಯ ಅತಿಥಿಗಳಾಗಿ ಡಾ. ಕಿಶೋರ್ ಕುಮಾರ್ ಕುಣಿಕುಳ್ಳಾಯ, ವಿಶ್ವನಾಥ ಡಿ. ಶೆಟ್ಟಿ, ತಲೇಕ ಸುಬ್ರಹ್ಮಣ್ಯ ಭಟ್, ಯೋಗೀಶ್ ಶರ್ಮಾ, ರಾಜನ್ ಪೆರಿಯಾ, ಶಿವಶಂಕರ ಎನ್.ನೆಕ್ರಾಜೆ, ಸಂಜೀವ ಶೆಟ್ಟಿ ಮೊಟ್ಟೆಕುಂಜ, ಡಾ. ರಾಜೇಂದ್ರ ಪಿಲಾಂಕಟ್ಟೆ, ಹರಿನಾರಾಯಣ ಮಾಸ್ತರ್, ಮುಖೇಶ್, ಕೃಷ್ಣ ಮಣಿಯಾಣಿ, ಸವಿತಾ, ಮೀನಾಕ್ಷಿ, ಭಾಷ್ಕರ ಪುರುಷ, ದಾಮೋದರ ಮೈಲುತೊಟ್ಟಿ, ವಿಶ್ವನಾಥ ಬಳ್ಳಪದವು, ರಾಜೇಶ್ ನೆಕ್ರಾಜೆ, ರಾಘವೇಂದ್ರ ಎಂ. ಮತ್ತಿತರರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸುಜಾತ ಮಾಣಿಮೂಲೆ ಅವರನ್ನು ಗೌರವಿಸಲಾಯಿತು. ರಾತ್ರಿ ಸತ್ಯನಾರಾಯಣ ಪೂಜೆ, ನೃತ್ಯ ಕಲಾ ಸಂಧ್ಯಾ ಕಾರ್ಯಕ್ರಮ, ಅನ್ನದಾನ ನಡೆಯಿತು.
ಇಂದು(ನ.21) ಬೆಳಗ್ಗೆ ಭಜನೆ, ಸಂಗೀತ ಕಚೇರಿ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ಭಜನೆ, ಮನು ಪಣಿಕ್ಕರ್ ಬಳಗದವರಿಂದ ತಾಯಂಬಕ, ನಾರಂಪಾಡಿ ಕ್ಷೇತ್ರದಿಂದ ಉಲ್ಪೆ ಮೆರವಣಿಗೆ ನಡೆಯಲಿದೆ. ರಾತ್ರಿ ಪಾಟು ಪೆಟ್ಟಿ, ಮಹಾಪೂಜೆ, ಅನ್ನದಾನ ನಡೆಯಲಿದೆ. ಸಾಂಸ್ಕøತಿ ಕಾರ್ಯಕ್ರಮದಂಗವಾಗಿ ಶ್ರೀ ಅಯ್ಯಪ್ಪ ಸ್ವಾಮೀ ಯಕ್ಷಗಾನ ಕಲಾ ಸಂಘ ಇದರ ವತಿಯಿಂದ ದಕ್ಷ ಯಜ್ಞ ಗಧಾಯುದ್ಧ ಯಕ್ಷಗಾನ ಬಯಲಾಟ ನಡೆಯಲಿದೆ.