ಬೆಂಗಳೂರು: ಜನಪ್ರಿಯ ಮೆಸೇಜಿಂಗ್ ಆಯಪ್ ವಾಟ್ಸ್‌ಆಯಪ್ ಕೆಲವು ದಿನಗಳ ಹಿಂದೆ ಪರಿಚಯಿಸಿರುವ ಹೊಸ ವೈಶಿಷ್ಟ್ಯ ವಾಟ್ಸ್‌ಆಯಪ್ ಚಾನೆಲ್ (WhatsApp Channel) ಭಾರತದಲ್ಲೂ ಭಾರೀ ಜನಪ್ರಿಯವಾಗುತ್ತಿದೆ.
ಬೆಂಗಳೂರು: ಜನಪ್ರಿಯ ಮೆಸೇಜಿಂಗ್ ಆಯಪ್ ವಾಟ್ಸ್‌ಆಯಪ್ ಕೆಲವು ದಿನಗಳ ಹಿಂದೆ ಪರಿಚಯಿಸಿರುವ ಹೊಸ ವೈಶಿಷ್ಟ್ಯ ವಾಟ್ಸ್‌ಆಯಪ್ ಚಾನೆಲ್ (WhatsApp Channel) ಭಾರತದಲ್ಲೂ ಭಾರೀ ಜನಪ್ರಿಯವಾಗುತ್ತಿದೆ.
ರಾಜಕಾರಣಿಗಳು, ಸಿನಿಮಾ ನಟ ನಟಿಯರು, ಕ್ರೀಡಾಪಟುಗಳು ಸೇರಿದಂತೆ ಸೆಲೆಬ್ರಿಟಿಗಳು ತಮ್ಮ ಅಭಿಮಾನಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರಲು ವಾಟ್ಸ್‌ಆಯಪ್ ಚಾನೆಲ್ ಮೊರೆ ಹೋಗುತ್ತಿದ್ದಾರೆ.
ಇದೀಗ ದೆಹಲಿ ಕಾಂಗ್ರೆಸ್ ಸಮಿತಿ ರಾಹುಲ್ ಗಾಂಧಿ ಅವರ ವಾಟ್ಸ್‌ಆಯಪ್ ಚಾನೆಲ್ ಆರಂಭಿಸಿದೆ.
ದೆಹಲಿ ಕಾಂಗ್ರೆಸ್ ನಾಯಕ ಅರವಿಂದರ್ ಸಿಂಗ್ ಲವ್ಲಿ ಅವರು ಬುಧವಾರ ರಾಹುಲ್ ಗಾಂಧಿ ಅವರ ವಾಟ್ಸ್‌ಆಯಪ್ ಚಾನೆಲ್ ಪ್ರಾರಂಭಿಸಿದರು. ಈ ಚಾನೆಲ್‌ಗೆ ಒಂದೇ ದಿನದಲ್ಲಿ 42 ಲಕ್ಷ ಜನರು ಸೇರಿದ್ದಾರೆ ಎಂದು ಅರವಿಂದರ್ ಸಿಂಗ್ ಲವ್ಲಿ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳಲ್ಲಿ ನಂಬಿಕೆ ಇರುವವರು ನೇರವಾಗಿಯೇ ರಾಹುಲ್ ಗಾಂಧಿ ಅವರ ಪೋಸ್ಟ್‌ಗಳನ್ನು ವಾಟ್ಸ್‌ಆಯಪ್ ಚಾನೆಲ್ ಮೂಲಕ ಪಡೆದುಕೊಳ್ಳಬಹುದು ಎಂದು ಅವರು ಹೇಳಿದರು.