HEALTH TIPS

ಭಾರತ 4 ಟ್ರಿಲಿಯನ್ ಡಾಲರ್ ಆರ್ಥಿಕತೆ ಸುದ್ದಿ ಸಾಮಾಜಿಕ ಜಾಲತಾಣಗಳ ಸೃಷ್ಟಿ!

             ನವದೆಹಲಿ: ಭಾರತ 4 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿದೆ ಎಂಬ ಸುದ್ದಿ ಭಾನುವಾರ ಎಲ್ಲೆಡೆ ವೈರಲ್ ಆಗತೊಡಗಿತ್ತು. 

               ಅರ್ಥಶಾಸ್ತ್ರಜ್ಞರು ಈ ಬಗ್ಗೆ ಮಾತನಾಡಿದ್ದು, ಭಾರತದ ಜಿಡಿಪಿ 4 ಟ್ರಿಲಿಯನ್ ಡಾಲರ್ ದಾಟಿದೆ ಎಂಬುದು ಸಾಮಾಜಿಕ ಮಾಧ್ಯಮದ ಸೃಷ್ಟಿಯಷ್ಟೇ. ಇದು ತಪ್ಪು ಮಾಹಿತಿಯನ್ನೊಳಗೊಂಡ ವೈರಲ್ ಸುದ್ದಿಯಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
 
                  ಭಾರತ ಇನ್ನಷ್ಟೇ ಈ ಗುರಿಯನ್ನು ತಲುಪಬೇಕಿದೆ. ಸರ್ಕಾರದ ಅಂದಾಜಿನ ಪ್ರಕಾರ 2024ರ ಆರ್ಥಿಕ ವರ್ಷದಲ್ಲಿ  ಭಾರತದ ಪೂರ್ಣ ಜಿಡಿಪಿ 302 ಲಕ್ಷ ಕೋಟಿಯಷ್ಟಿರಲಿದೆ, ಇದು 3.6 ಟ್ರಿಲಿಯನ್ ಡಾಲರ್ ನಷ್ಟಾಗಲಿದೆ. ಅಂತರರಾಷ್ಟ್ರೀಯ ಹಣಕಾಸು ನಿಧಿ ಸಹ ದೇಶದ 2023 ನೇ ಸಾಲಿನ ಜಿಡಿಪಿಯನ್ನು $3.6 ಟ್ರಿಲಿಯನ್‌ಗೆ ಅಂದಾಜಿಸಿದೆ.

                ಸಾಮಾಜಿಕ ಮಾಧ್ಯಮದಲ್ಲಿನ ಈ ಸುಳ್ಳು ಸುದ್ದಿಯನ್ನು ಹಲವು ರಾಜಕಾರಣಿಗಳೂ ನಂಬಿದ್ದರು. ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಸಹ ಭಾರತ 4 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿದ್ದಕ್ಕಾಗಿ ಸಂತಸ ವ್ಯಕ್ತಪಡಿಸಿ ಟ್ವೀಟ್ ಮಾಡಿ ಪ್ರಧಾನಿ ಮೋದಿ ನಾಯಕತ್ವವನ್ನು ಹೊಗಳಿದ್ದರು.

           ಜಲ್ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ಆಂಧ್ರಪ್ರದೇಶದ ಬಿಜೆಪಿ ಅಧ್ಯಕ್ಷ್ಯೆ ಡಿ ಪುರಂದರೇಶ್ವರಿ ಸೇರಿದಂತೆ ಹಲವರು ಭಾರತದ ಈ ಸಾಧನೆಗಾಗಿ ಪ್ರಧಾನಿ ಮೋದಿಗೆ ಅಭಿನಂದನೆ ಸಲ್ಲಿಸಿದ್ದರು.

                  ಭಾರತ 2023-24 ರ ಏಪ್ರಿಲ್- ಜೂನ್ ಅವಧಿಯಲ್ಲಿ ಶೇ.7.8 ರಷ್ಟು ಜಿಡಿಪಿ ಬೆಳವಣಿಗೆ ಸಾಧಿಸಿತ್ತು. ಇದು ಕಳೆದ 4 ತ್ರೈಮಾಸಿಕದಲ್ಲೇ ಅತ್ಯಧಿಕ ಜಿಡಿಪಿ ಬೆಳವಣಿಗೆಯಾಗಿತ್ತು ಹಾಗೂ ಸೇವಾ ವಲಯದಲ್ಲಿನ ಜಿಡಿಪಿ 2 ಅಂಕಿಯ ವಿಸ್ತರಣೆ ಕಂಡಿತ್ತು. ಈ ಮೂಲಕ ಭಾರತ ಜಗತ್ತಿನಲ್ಲೇ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

                    ಜೂನ್ ತ್ರೈಮಾಸಿಕದಲ್ಲಿ 7.8% ಜಿಡಿಪಿ ಬೆಳವಣಿಗೆಯು ಅದೇ ಅವಧಿಯಲ್ಲಿ ಚೀನಾ ದಾಖಲಿಸಿದ 6.3% ಗಿಂತ ಹೆಚ್ಚಾಗಿದೆ. ಆಗಸ್ಟ್‌ನಲ್ಲಿ ಬಿಡುಗಡೆಯಾದ ರಾಷ್ಟ್ರೀಯ ಅಂಕಿಅಂಶ ಕಚೇರಿ (NSO) ಮಾಹಿತಿಯ ಪ್ರಕಾರ, ಕೃಷಿ ವಲಯದ ಒಟ್ಟು ಮೌಲ್ಯವರ್ಧನೆಯು (GVA) 3.5% ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ, ಇದು ಏಪ್ರಿಲ್-ಜೂನ್ 2022-23 ರಲ್ಲಿ ದಾಖಲಾಗಿದ್ದ ಶೇ. 2.4% ಕ್ಕಿಂತಲೂ ಹೆಚ್ಚಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries