ಕಾಸರಗೋಡು: ಕಂದಾಯ ಜಿಲ್ಲಾ ಶಾಲಾ ವಿಜ್ಞಾನ ಮೇಳ ನ 4ರಿಂದ 6ರ ವರೆಗೆ ಅಂಬಲತ್ತರ ಸರ್ಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರುಗಲಿದ್ದು, ಸಿದ್ಧತೆ ಪೂರ್ತಿಗೊಂಡಿರುವುದಾಗಿ ಸ್ವಾಗತ ಸಮಿತಿ ಅಧ್ಯಕ್ಷ, ಉದುಮ ಶಾಸಕ ಸಿ.ಎಚ್ ಕುಞಂಬು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ವಿಜ್ಞಾನ, ಗಣಿತ, ಸಾಮಾಜಿಕ ವಿಜ್ಞಾನ, ಐಟಿ, ವೃತ್ತಿಪರಿಚಯ ಮೇಳಗಳು ವಿವಿಧ ದಿನಗಳಲ್ಲಾಗಿ ನಡೆಯಲಿದೆ. 4ರಂದು ಬೆಳಗ್ಗೆ 9.30ಕ್ಕೆ ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಮೇಳ ಉದ್ಘಾಟಿಸುವರು. ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಸಮಾರೋಪ ಸಮಾರಂಭವನ್ನು ನ. 6ರಂದು ಸಂಜೆ ಶಸಕ ಸಿ.ಎಚ್ ಕುಞಂಬು ಉದ್ಘಾಟಿಸಿ, ಬಹುಮಾನ ವಿತರಿಸುವರು. ಕಾರ್ಯಕ್ರಮದ ಅಂಗವಾಗಿ ನ. 2ರಂದು ಬೆಳಗ್ಗೆ 10ಕ್ಕೆ ಅಂಬಲತ್ತರ ಸರ್ಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ವಿಜ್ಞಾನ ನಾಟಕ ಪ್ರದರ್ಶನಗೊಳ್ಳುವುದು.
ಜಿಲ್ಲಾ ವಿಜ್ಞಾನ ಮೇಳದಲ್ಲಿ ಕಂದಾಯ ಜಿಲ್ಲೆಯ ಏಳು ಉಪಜಿಲ್ಲೆಗಳಿಂದ 2500ಕ್ಕೂ ಹೆಚ್ಚು ಸ್ಪರ್ಧಾಳುಗಳು, ಹೆತ್ತವರು, ಶಿಕ್ಷಕರು, ಸಾರ್ವಜನಿಕರು ಒಳಗೊಂಡಂತೆ ಆರುವರೆ ಸಆವಿರಕ್ಕೂ ಹೆಚ್ಚುಮಂದಿ ಪಾಲ್ಗೊಲ್ಳುವ ನಿರೀಕ್ಷೆಯಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಶಿಕ್ಷಣ ಉಪನಿರ್ದೇಶಕ ನಂದಿಕೇಶನ್, ಕಾಞಂಗಾಡು ಶೈಕ್ಷಣಿಕ ಜಿಲ್ಲಾ ಶಿಕ್ಷಣಾಧಿಕಾರಿ ಬಾಲಾದೇವಿ.ಟಿಪಿ ಕೆಎಎಸ್, ಗ್ರಾಮ ಪಂಚಾಯಿತಿ ಸದಸ್ಯೆ ಸಬಿತಾ ಸಿ.ಕೆ, ಪ್ರಾಂಶುಪಾಲ ಪ್ರಶಾಂತ್ .ಕೆ.ವಿ, ಮುಖ್ಯ ಶಿಕ್ಷಕ ರಾಜೇಶ್ ಪಿ.ವಿ, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಬ್ದುಲ್ ಮಜೀದ್, ಸಿಬ್ಬಂದಿ ಕಾರ್ಯದರ್ಶಿ ಅನಿಲ್ ಕುಮಾರ್ ಫಿಲಿಪ್, ಕಾರ್ಯಕ್ರಮ ಸಮಿತಿ ಸಂಚಾಲಕ ರಾಜೇಶ್ ಸ್ಕಾರಿಯಾ, ಮಾಧ್ಯಮ ಸಮಿತಿ ಸಂಚಾಲಕ ರಹಮಾನ್ ಅಂಬಲತ್ತರ, ಮಾಧ್ಯಮ ಸಮಿತಿ ಸಂಚಾಲಕ ಜೈನುದ್ದೀನ್ ಮಾಸ್ಟರ್ ಉಪಸ್ಥಿತರಿದ್ದರು.