ಪಣಜಿ: ಇಲ್ಲಿನ ಐನಾಕ್ಸ್ ಕಾಂಪ್ಲೆಕ್ಸ್‌ನಲ್ಲಿ ನಡೆದ ಭಾರತದ 54ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಮಂಗಳವಾರ ಅಂತ್ಯಗೊಂಡಿತು. ನ.20ರಂದು ಆರಂಭವಾಗಿತ್ತು.
ಪಣಜಿ: ಇಲ್ಲಿನ ಐನಾಕ್ಸ್ ಕಾಂಪ್ಲೆಕ್ಸ್‌ನಲ್ಲಿ ನಡೆದ ಭಾರತದ 54ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಮಂಗಳವಾರ ಅಂತ್ಯಗೊಂಡಿತು. ನ.20ರಂದು ಆರಂಭವಾಗಿತ್ತು.
ಪರ್ಷಿಯಾದ ಚಲನಚಿತ್ರ, ಅಬ್ಬಾಸ್ ಅಮಿನಿ ಅವರ 'ಎಂಡ್‌ಲೆಸ್ ಬಾರ್ಡರ್ಸ್' ಅತ್ಯುತ್ತಮ ಸಿನಿಮಾಗೆ ನೀಡುವ ಗೋಲ್ಡನ್ ಪೀಕಾಕ್ ಪ್ರಶಸ್ತಿ, ಆಯಂಟನಿ ಚೆನ್ ಅವರ 'ಡ್ರಿಫ್ಟ್' ಚಿತ್ರಕ್ಕೆ ಐಸಿಎಫ್‌ಟಿ-ಯುನೆಸ್ಕ್ ಗಾಂಧಿ ಪದಕ ಪ್ರಶಸ್ತಿ ಲಭಿಸಿತು.
'ಕಾಂತಾರ' ಸಿನಿಮಾ ಖ್ಯಾತಿಯ ನಟ, ಕನ್ನಡಿಗ ರಿಷಪ್ ಶೆಟ್ಟಿ ಅವರು ವಿಶೇಷ ತೀರ್ಪುಗಾರರ ಪ್ರಶಸ್ತಿಗೆ ಪಾತ್ರರಾದರು.
ಜೀವಿತಾವಧಿ ಸಾಧನೆ ಪ್ರಶಸ್ತಿ ಗೌರವ ಹಾಲಿವುಡ್ ನಟ, ನಿರ್ಮಾಕ ಮೈಖೆಲ್ ಡಗ್ಲಾಸ್ ಅವರಿಗೆ ಸಂದಿತು. ಅತ್ಯುತ್ತಮ ವೆಬ್ ಸರಣಿ (ಒಟಿಟಿ) ಪ್ರಶಸ್ತಿಯನ್ನು ಅಮೆಜಾನ್ ಸರಣಿ 'ಪಂಚಾಯತ್ ಸೀಸನ್ 2' ಅನ್ನು ಪಡೆದುಕೊಂಡಿತು. 78 ವಿವಿಧ ದೇಶಗಳ 250 ಚಿತ್ರಗಳು ಪ್ರದರ್ಶನಗೊಂಡವು.