ಡೆಹ್ರಾಡೂನ್: ಬದರಿನಾಥ ಧಾಮದ ಪೋರ್ಟಲ್‌ಗಳನ್ನು ಬಂದ್ ಮಾಡುವುದರೊಂದಿಗೆ ವಿಶ್ವಪ್ರಸಿದ್ಧ ಚಾರ್ ಧಾಮ್ ಯಾತ್ರೆಗೆ ಶನಿವಾರ ಅಧಿಕೃತವಾಗಿ ತೆರೆ ಬಿದ್ದಿದೆ.
ಶನಿವಾರದ ವೇಳೆಗೆ ದಾಖಲೆಯ 56,13,635 ಯಾತ್ರಿಕರು ಹಿಮಾಲಯದ ಪುಣ್ಯಕ್ಷೇತ್ರಗಳ ದರ್ಶನ ಪಡೆದಿದ್ದು, ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ 10 ಲಕ್ಷದಷ್ಟು ಹೆಚ್ಚಳವಾಗಿದೆ.
ಬದರಿ ಕೇದಾರ ದೇವಸ್ಥಾನ ಸಮಿತಿಯ ಮಾಧ್ಯಮ ಪ್ರಭಾರಿ ಡಾ.ಹರೀಶ್ ಗೌರ್ ಮಾತನಾಡಿ, ‘ಶನಿವಾರ ಪಂಚಪೂಜೆಯ ಐದನೇ ದಿನದಂದು ದೇವಸ್ಥಾನದ ರಾವಲ್ ಸ್ವತಃ ಸ್ತ್ರೀವೇಷ ಧರಿಸಿ ಮಾತಾ ಲಕ್ಷ್ಮಿಯನ್ನು ಬದರಿನಾಥ ದೇವಸ್ಥಾನದ ಗರ್ಭಗುಡಿಗೆ ಕರೆದುಕೊಂಡು ಹೋಗುತ್ತಾರೆ’ ಎಂದರು.
"ಈ ವರ್ಷ ಚಾರ್‌ಧಾಮ್ ಮತ್ತು ಹೇಮಕುಂಡ್ ಸಾಹಿಬ್‌ಗೆ ಭೇಟಿ ನೀಡಲು ದಾಖಲೆಯ 56,13,635 ಯಾತ್ರಾರ್ಥಿಗಳು ಉತ್ತರಾಖಂಡಕ್ಕೆ ಬಂದಿದ್ದಾರೆ. ಕಳೆದ ವರ್ಷ ಚಾರ್ಧಾಮ್ ಯಾತ್ರೆಗೆ 46 27 292" ಭಕ್ತರು ಬಂದಿದ್ದರು. ಎಂದು ಬದ್ರಿ ಕೇದಾರ್ ದೇವಾಲಯ ಸಮಿತಿ ಅಧ್ಯಕ್ಷ ಅಜೇಂದ್ರ ಅಜಯ್ ಅವರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.
ಏತನ್ಮಧ್ಯೆ, ಸಮಿತಿಯ ವಕ್ತಾರರು "ಈ ಬಾರಿ ಯಮುನೋತ್ರಿ ಧಾಮಕ್ಕೆ 735244, ಗಂಗೋತ್ರಿ ಧಾಮಕ್ಕೆ 9,05,174, ಕೇದಾರನಾಥ ಧಾಮಕ್ಕೆ 1961025, ಬದರಿನಾಥ ಧಾಮಕ್ಕೆ 1834729 ಮತ್ತು ಹೇಮಕುಂಡ್ ಸಾಹಿಬ್‌ಗೆ 177463 ಯಾತ್ರಿಕರು ಭೇಟಿ ನೀಡಿದ್ದಾರೆ" ಎಂದು ಹೇಳಿದ್ದಾರೆ.