ಶಬರಿಮಲೆ: ಸನ್ನಿಧಿ ಪರಿಸರದ ಅಂಗಡಿಗಳಲ್ಲಿ ಕಾನೂನು ಮಾಪನ ಶಾಸ್ತ್ರ ಇಲಾಖೆ ನೇತೃತ್ವದಲ್ಲಿ ತಪಾಸಣೆ ನಡೆಸಲಾಗಿದ್ದು, ಕಡಿಮೆ ಪ್ರಮಾಣ ಹಾಗೂ ಅಧಿಕ ಶುಲ್ಕ ವಸೂಲಿ ಮಾಡುತ್ತಿರುವುದು ಕಂಡು ಬಂದಿದೆ.
ಡ್ಯೂಟಿ ಮ್ಯಾಜಿಸ್ಟ್ರೇಟ್ ಪ್ರಮೋದ್ ನೇತೃತ್ವದಲ್ಲಿ ನಡೆದ ತಪಾಸಣೆಯಲ್ಲಿ ನ.22ರವರೆಗೆ ಒಂಬತ್ತು ಪ್ರಕರಣಗಳು ಪತ್ತೆಯಾಗಿದ್ದು, ರೂ.56 ಸಾವಿರ ದಂಡ ವಿಧಿಸಲಾಗಿದೆ. ನಾಗರಿಕ ಸರಬರಾಜು, ಕಾನೂನು ಮಾಪನಶಾಸ್ತ್ರ, ಆರೋಗ್ಯ ಮತ್ತು ಕಂದಾಯ ಇಲಾಖೆಗಳ ಸಮನ್ವಯದಲ್ಲಿ ಸನ್ನಿಧಾನಂ ಸ್ಕ್ವಾಡ್ 24 ಗಂಟೆಗಳ ಕಾಲ ತಪಾಸಣೆ ನಡೆಸುತ್ತಿದೆ.