ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ತಮ್ಮ ಅವಿಭಜಿತ ಕುಟುಂಬವು ಸುಮಾರು ₹59 ಕೋಟಿ ಮೌಲ್ಯದ ಆಸ್ತಿ ಹೊಂದಿದೆ ಎಂದು ಘೋಷಿಸಿದ್ದಾರೆ.
ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ತಮ್ಮ ಅವಿಭಜಿತ ಕುಟುಂಬವು ಸುಮಾರು ₹59 ಕೋಟಿ ಮೌಲ್ಯದ ಆಸ್ತಿ ಹೊಂದಿದೆ ಎಂದು ಘೋಷಿಸಿದ್ದಾರೆ.
ನವೆಂಬರ್ 30ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವ ವೇಳೆ ಗುರುವಾರ ಸಲ್ಲಿಸಿದ ಅಫಿಡವಿಟ್ ಪ್ರಕಾರ, ಅವರು ಸ್ವಂತ ಕಾರು ಸಹ ಹೊಂದಿಲ್ಲ.
ಅವರ ವಿರುದ್ಧ ಒಂಬತ್ತು ಪ್ರಕರಣಗಳು ಬಾಕಿ ಉಳಿದಿವೆ. ಎಲ್ಲವೂ ತೆಲಂಗಾಣ ರಾಜ್ಯ ಆಂದೋಲನದ ಸಮಯದಲ್ಲಿ ದಾಖಲಾಗಿವೆ.
ಅವರ ಪತ್ನಿ ಶೋಭಾ ಅವರ ಹೆಸರಿನಲ್ಲಿರುವ ಒಟ್ಟು ಚರಾಸ್ತಿಗಳ ಮೌಲ್ಯವು ಏಳು ಕೋಟಿಗಿಂತ ಹೆಚ್ಚಿದ್ದು, ಅವರ ಅವಿಭಜಿತ ಕುಟುಂಬದ ಹೆಸರಿನಲ್ಲಿ ಒಂಬತ್ತು ಕೋಟಿ ಮೌಲ್ಯದ ಚರಾಸ್ತಿ ಇದೆ. ಪತ್ನಿ ಶೋಭಾ ಬಳಿ ಸುಮಾರು ₹1.5 ಕೋಟಿ ಮೌಲ್ಯದ 2.81 ಕೆಜಿ ಚಿನ್ನಾಭರಣ, ವಜ್ರ ಮತ್ತು ಇತರ ಬೆಲೆಬಾಳುವ ವಸ್ತುಗಳು ಇವೆ.
ರಾವ್ ಅವರ ಹೆಸರಿನಲ್ಲಿರುವ ಸ್ಥಿರಾಸ್ತಿಗಳ ಒಟ್ಟು ಮಾರುಕಟ್ಟೆ ಮೌಲ್ಯ ಸುಮಾರು ₹8.50 ಕೋಟಿಗಳಾಗಿದ್ದು, ಅವಿಭಜಿತ ಕುಟುಂಬದ ಹೆಸರಿನಲ್ಲಿ ಸುಮಾರು ₹15ಕೋಟಿ ಮೌಲ್ಯದ ಆಸ್ತಿ ಇದೆ.
ಐಟಿ ರಿಟರ್ನ್ಸ್ ಪ್ರಕಾರ, ರಾವ್ ಅವರ ಒಟ್ಟು ಆದಾಯವು ಮಾರ್ಚ್ 31, 2023ರ ವೇಳೆಗೆ ₹1.60 ಕೋಟಿ ಗಿಂತ ಹೆಚ್ಚಿದ್ದರೆ, ಮಾರ್ಚ್ 31, 2019ರ ವೇಳೆಗೆ ಇದು ₹ 1.74 ಕೋಟಿ ಆಗಿತ್ತು.