ಕಾಸರಗೋಡು: ಕೇರಳ ವಿಧಾನಸಭೆಯ ಹಿಂದುಳಿದ ಸಮುದಾಯಗಳ ಕಲ್ಯಾಣ ಸಮಿತಿಯು ಡಿಸೆಂಬರ್ 5ರಂದು ಬೆಳಗ್ಗೆ 10.30ಕ್ಕೆ ಕಾಸರಗೋಡು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಸಬೆ ನಡೆಸಲಿದೆ. ಈ ಸಂದರ್ಭ ಜಿಲ್ಲೆಯಿಂದ ಲಭಿಸಿದ ಹಾಗೂ ಸಮಿತಿಯ ಪರಿಗಣನೆಯಲ್ಲಿರುವ ಮನವಿಗಳನ್ನು ಸಂಬಂಧಪಟ್ಟ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ಪರಿಶೀಲಿಸಲಾಗುವುದು. ಸರ್ಕಾರಿ ಸೇವೆಗಳು, ಸಾರ್ವಜನಿಕ ವಲಯದ ಸಂಸ್ಥೆಗಳು, ವಿಶ್ವವಿದ್ಯಾನಿಲಯಗಳು, ಸ್ಥಳೀಯಾಡಳಿತ ಸಂಸ್ಥೆಗಳು, ಸರ್ಕಾರ ನಿಯಂತ್ರಣದಲ್ಲಿರುವ ಇತರೆ ಸಂಸ್ಥೆಗಳು ಎಂಬಿವುಗಳ ನೇಮಕಾತಿಯಲ್ಲಿ ಹಿಂದುಳಿದ ಸಮುದಾಯಗಳಲ್ಲಿರುವವರಿಗೆ ಲಭಿಸಬೇಕಾದ ಸಾಮುದಾಯಿಕ ಪ್ರಾತಿನಿಧ್ಯ, ಅವರು ಎದುರಿಸುತ್ತಿರುವ ವಿವಿಧ ಶೈಕ್ಷಣಿಕ ಮತ್ತು ಸಾಮಾಜಿಕ ಸಮಸ್ಯೆಗಳು ಕುರಿತು ಹಿಂದುಳಿದ ವರ್ಗದವರಿಂದ ಹಾಗೂ ಸಂಘಟನಾ ಪದಾಧಿಕಾರಿಗಳಿಂದ ಮನವಿ ಸ್ವೀಕರಿಸಿ ಹಿಂದುಳಿದ ವಿಭಾಗ ಅಭಿವೃದ್ಧಿ, ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗ ಅಭಿವೃದ್ಧಿ, ಜನರಲ್ ವಿದ್ಯಾಭ್ಯಾಸ, ಸ್ಥಳೀಯ ಸ್ವ-ಸರ್ಕಾರ, ಕಂದಾಯ, ಸಾಮಾಜಿಕ ನ್ಯಾಯ ಉದ್ಯೋಗ ಮತ್ತು ಕೌಶಲ್ಯಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಕೈಗಾರಿಕೆ ಮತ್ತು ಉನ್ನತ ಶಿಕ್ಷಣ ಇಲಾಖೆಗಳ ಅಧಿಕಾರಿಗಳೊಂದಿಗೂ ಚರ್ಚೆ ನಡೆಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.