ಕೊಲ್ಲಂ: ಆರು ವರ್ಷದ ಬಾಲಕಿಯನ್ನು ಕಾರಿನಲ್ಲಿ ಬಂದ ಗುಂಪೆÇಂದು ಅಪಹರಣಗೈದ ಘಟನೆ ಓಯೂರಿನಲ್ಲಿ ನಡೆದಿದೆ. ಓಯೂರು ಮೂಲದ ರಾಜಿ ಅವರ ಪುತ್ರಿ ಅಭಿಕೇಲ್ ಸಾರಾ ರಾಜಿಯನ್ನು ಅಪಹರಿಸಲಾಗಿದೆ.
ನಾಲ್ವರ ತಂಡ ಓಯೂರು ಕಟಾಡಿಮುಕ್‍ನಲ್ಲಿರುವ ವೆಲ್ಲಕಾರ್ ಎಂಬಲ್ಲಿಗೆ ಬಂದು ಬಾಲಕಿಯನ್ನು ಅಪಹರಿಸಿದೆ. ಸಹೋದರನ ಜೊತೆ ಟ್ಯೂಷನ್ ಗೆ ತೆರಳುತ್ತಿದ್ದಾಗ ನಿನ್ನೆ ಸಂಜೆ ಈ ಘಟನೆ ನಡೆದಿದೆ. ಅಪಹರಣ ತಡೆಯಲು ಯತ್ನಿಸಿ ಸಹೋದರನನ್ನು ಥಳಿಸಲಾಗಿದೆ ಎಂದು ಸಹೋದರ ಜೋನಾಥನ್ ಹೇಳಿದ್ದಾರೆ.
ಈ ಮಧ್ಯೆ ಅಪಹರಣಕ್ಕೊಳಗಾಗಿರುವ ಆರು ವರ್ಷದ ಬಾಲಕಿಯ ಬಿಡುಗಡೆಗೆ ತಂಡ 5 ಲಕ್ಷ ರೂ.ಬೇಡಿಕೆ ಇರಿಸಿದೆ. ಮಗುವನ್ನು ಅಪಹರಿಸಿದ ಗುಂಪಿಗೆ ಸೇರಿದ ಯುವತಿಯೊಬ್ಬರು ಈ ಬಗ್ಗೆ ದೂರವಾಣಿ ಮೂಲಕ ಎಚ್ಚರಿಕೆ ನೀಡಿರುವುದಾಗಿ ತಿಳಿದುಬಂದಿದೆ.
ಆಗಂತುಕ ಮಹಿಳೆ ಮಗುವಿನ ತಾಯಿಯೊಂದಿಗೆ ಮಾತನಾಡಿ ಹಣ ನೀಡದಿದ್ದರೆ ಮಗುವನ್ನು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದೆ. ಪೆÇೀಲಿಸರು ದೂರವಾಣಿ ಕರೆಯ ಮೂಲವನ್ನು ಕೇಂದ್ರೀಕರಿಸಿ ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ಅಪಹರಣಕ್ಕೊಳಗಾದ ಕಾರು ಮತ್ತು ಹತ್ತಿರದ ಮೂರು ಜಿಲ್ಲೆಗಳನ್ನು ಕೇಂದ್ರೀಕರಿಸಿ ತನಿಖೆ ಪ್ರಗತಿಯಲ್ಲಿದೆ. ಸಣ್ಣ ರಸ್ತೆಗಳಲ್ಲಿ ತನಿಖೆ ನಡೆಸಲಾಗುತ್ತಿದೆ.