HEALTH TIPS

₹600 ಕೋಟಿ ಒಡೆಯ ವಿವೇಕಾನಂದ ಶ್ರೀಮಂತ ಅಭ್ಯರ್ಥಿ

              ಹೈದರಾಬಾದ್‌: ಚೆನ್ನೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಿ. ವಿವೇಕಾನಂದ ಅವರು ತೆಲಂಗಾಣ ವಿಧಾನಸಭಾ ಚುನಾವಣೆಯ ಕಣದಲ್ಲಿರುವ ಅಭ್ಯರ್ಥಿಗಳ ಪೈಕಿ ಅತ್ಯಂತ ಶ್ರೀಮಂತ. ಇವರು ತಮ್ಮ ಬಳಿ ₹602 ಕೋಟಿ ಮೌಲ್ಯದ ಆಸ್ತಿ ಇದೆ ಎಂದು ಘೋಷಿಸಿಕೊಂಡಿದ್ದಾರೆ.

               ವಿವೇಕಾನಂದ ಮತ್ತು ಅವರ ಪತ್ನಿ ₹377 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ.

ಜೊತೆಗೆ ₹225 ಕೋಟಿ ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಅವರ ಪತ್ನಿ ₹41.5 ಕೋಟಿ ಸಾಲ ಹೊಂದಿದ್ದಾರೆ ಎಂದು ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ನಮೂದಿಸಲಾಗಿದೆ.

             2019ರ ಆರ್ಥಿಕ ವರ್ಷದಲ್ಲಿ ₹4.66 ಕೋಟಿ ಇದ್ದ ಅವರ ವಾರ್ಷಿಕ ಆದಾಯವು ಕಳೆದ ಆರ್ಥಿಕ ವರ್ಷದಲ್ಲಿ ₹6.26 ಕೋಟಿಗೆ ಏರಿಕೆಯಾಗಿದೆ. ಇದೇ ಅವಧಿಯಲ್ಲಿ ಅವರ ಪತ್ನಿಯ ವಾರ್ಷಿಕ ಆದಾಯವು ₹6.09 ಕೋಟಿಯಿಂದ ₹9.61 ಕೋಟಿಗೆ ಏರಿಕೆಯಾಗಿದೆ.

               ₹460 ಕೋಟಿ ಆಸ್ತಿ ಘೋಷಿಸಿರುವ ಪಾಲೈರು ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಪಿ. ಶ್ರೀನಿವಾಸ್‌ ರೆಡ್ಡಿ ಅವರು ಎರಡನೆಯ ಅತ್ಯಂತ ಶ್ರೀಮಂತ. ನವೆಂಬರ್‌ 9ರಂದು ಅವರು ನಾಮಪತ್ರ ಸಲ್ಲಿಸಿದರು. ಅವರಿಗೆ ಸೇರಿದ ಸ್ವತ್ತುಗಳ ಮೇಲೆ ಆದಾಯ ತೆರಿಗೆ ಇಲಾಖೆ ಆ ದಿನ ದಾಳಿ ನಡೆಸಿತ್ತು. ಇದು ರಾಜಕೀಯ ದುರುದ್ದೇಶದ ದಾಳಿ ಎಂದು ಶ್ರೀನಿವಾಸ್‌ ರೆಡ್ಡಿ ಆರೋಪಿಸಿದ್ದರು.

             ಕಣದಲ್ಲಿರುವ ಮೂರನೇ ಶ್ರೀಮಂತ ಅಭ್ಯರ್ಥಿ ಕಾಂಗ್ರೆಸ್‌ನ ರಾಜ್‌ಗೋಪಾಲ್‌ ರೆಡ್ಡಿ. ಇವರ ಕುಟುಂಬದ ಒಟ್ಟು ಆಸ್ತಿ ಮೌಲ್ಯ ₹459 ಕೋಟಿ.

                    ನಾಲ್ಕನೇ ಶ್ರೀಮಂತ ಅಭ್ಯರ್ಥಿ ಬಿಆರ್‌ಎಸ್‌ನ ಪೈಳ್ಲ ಶೇಖರ್ ರೆಡ್ಡಿ ಅವರು ₹227 ಕೋಟಿ ಮೌಲ್ಯದ ಆಸ್ತಿ ಘೋಷಿಸಿದ್ದಾರೆ. ಬಿಆರ್‌ಎಸ್‌ ಮುಖ್ಯಸ್ಥ, ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್‌ ಅವರು ₹59 ಕೋಟಿ ಮೌಲ್ಯದ ಆಸ್ತಿ ಘೋಷಿಸಿಕೊಂಡಿದ್ದಾರೆ. ಒಟ್ಟು 4,798 ಅಭ್ಯರ್ಥಿಗಳು ಕಣದಲ್ಲಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries